October 27, 2021

ಉದಯಪ್ರಭ

ಹೊಸ ಹುರುಪಿನ ಸಂಭ್ರಮ

ಸಾರಿಗೆ ಬಸ್ ಗಳ ಆಯುಧ ಪೂಜೆಗೆ 100 ರೂ. ಕೊಟ್ಟ ಸರ್ಕಾರ !

ಬೆಂಗಳೂರು- ಆಯುಧ ಪೂಜೆ ದಿನ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳು ಹಾಗೂ ಯಂತ್ರೋಪಕರಣಗಳನ್ನು ಸಾಂಪ್ರದಾಯಿಕವಾಗಿ ಪೂಜಿಸುವಂತೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಪ್ರತಿ ಬಸ್‌ಗೆ ತಲಾ 100 ರು. ಹಾಗೂ ಪ್ರತಿ ವಿಭಾಗೀಯ ಕಾರ್ಯಾಗಾರಕ್ಕೆ 1 ಸಾವಿರ ರು. ಮುಂಗಡ ನಗದು ಪಡೆದು ಪೂಜಾ ಕಾರ್ಯ ನೆರವೇರಿಸಬೇಕು ಎಂದು ಸೂಚಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಸಾರಿಗೆ ಇಲಾಖೆ 100ರೂ ನೀಡುತ್ತಿದ್ದು ಆದರೆ ಬಹುತೇಕ ಬಸ್ ಚಾಲಕರು ಮತ್ತು ನಿರ್ವಾಹಕರು ತಮ್ಮ ದುಡಿಮೆಯ ಹಣವನ್ನೇ ಖರ್ಚು ಮಾಡಿ ಹೂಗಳಿಂದ ಅಲಂಕರಿಸುತ್ತಾರೆ. ಈ ಬಾರಿಯೂ ಅದೇ ಪುನರಾವರ್ತನೆ ಆಗಿದೆ.