October 27, 2021

ಉದಯಪ್ರಭ

ಹೊಸ ಹುರುಪಿನ ಸಂಭ್ರಮ

ಅಡಕತ್ತರಿಯಲ್ಲಿ ಸಿಲುಕಿದ ಹೋಟೆಲ್ ಉದ್ಯಮ

ಹೊಟೇಲ್ ಉದ್ಯಮ ನೆಲಕಚ್ಚಿದೆ. ಕೊರೋನಾ ಮಹಾಮಾರಿ ಕಾರಣಕ್ಕೆ ಹೊಟೇಲ್ ಉದ್ಯಮ ಇಂದು ತೀವ್ರ ನಷ್ಟದಲ್ಲಿದ್ದು, ಮಾಲಕರು, ಕಾರ್ಮಿಕರು ಹಳ್ಳಿಗೆ ಹೋಗಿ ಕೃಷಿ ಮಾಡುತ್ತಿದ್ದಾರೆ. ಇನ್ನು ಕೆಲವರು ನಿರ್ಗತಿಕರಾಗಿದ್ದು, ಈ ಉದ್ಯಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನೋವಿನ ಕಥೆಯಿದು

ಒಂದು ಕಾಲದಲ್ಲಿ ಉಚ್ಚಾಯ ಸ್ಥಿತಿ ಯಲ್ಲಿದ್ದ ಹೊಟೇಲು ಗಳು ಇಂದು ಬಂದ್ ಆಗುವ ‌ಪರಿಸ್ಥಿತಿಗೆ ಬಂದು ಮುಟ್ಟಿವೆ..

ಕಾರಣ ಹುಡುಕುತ್ತಾ ಹೋದರೆ ಹಲವು ಕಾಣುತ್ತವೆ.
ಎಲ್ಲರ ಕಣ್ಣೂ ಈ ಉದ್ಯಮ ಕ್ಕೆ ಬಿದ್ದಿದೆ. ಇದರಲ್ಲಿ ಜಾಸ್ತಿ ಪ್ರಾಫಿಟ್ ಎಂದು ಹೆಚ್ಚಿನವರ ಅನಿಸಿಕೆ.
ಆದರೆ ಈ ಉದ್ಯಮ ನಡೆಸಲು ಎಷ್ಟು ಕಷ್ಟ ಎಂದು ಅದನ್ನು ಮಾಡಿದವರಿಗೆ ಗೊತ್ತು. ಹಾಗೂ ,ಹೀಗೂ ,ಹೆಗೋ ನಡೆಸುತ್ತಿದ್ದರು. ಈಗ ಈ ಕೊರೊನ ದಿಂದಾಗಿ ಅದಕ್ಕೂ ಕಲ್ಲು ಬಿತ್ತು. ಕಳೆದ ವರ್ಷ 6, 7 ತಿಂಗಳು ಬಂದ್ ಇದ್ದ ಹೊಟೇಲು ಗಳು ಹೇಗೊ ಮಾಡಿ ಹಳಿ ಹಿಡಿದಿದ್ದವು. ಈಗ ಕೊರೊನ ದ ಎರಡನೇ ಹಂತ ಎಂಬ ಭೂತ ದ ಹಾವಳಿ ಯಿಂದ ಪುನಃ ಬಂದ್ ಆಗುವ ‌ಹಂತಕ್ಕೆ ಬಂದು ಮುಟ್ಟಿವೆ.


ಇದು ನಿಜವಾಗಿಯೂ ಸಾಧುವಲ್ಲ. ಇಲ್ಲಿ ಕೊರಾನಾ ಪೆಶಂಟ್ ಕಮ್ಮಿ. ತೊರೀಸುವುದು ಜಾಸ್ತಿ.
ಮೊನ್ನೆ ನಮ್ಮ ಪಕ್ಕದ ಲ್ಲಿಯೆ ೧೦ ಜನ ಹೋಟೆಲ್ ಕಾರ್ಮಿಕರು ಕೊರಾನ ಟೆಸ್ಟ್ ಮಾಡಿಸಿ ದಾಗ ಅವರಲ್ಲಿ ೪ ಜನಕ್ಕೆ ಪಾಸಿಟಿವ್ ಎಂದು ಬಂತು. ಅವರು ನಿಜವಾಗಿ ಹುಷಾರಿದ್ದರು…


ಹೆದರಿ ಹೇಗೊ ತಪ್ಪಿಸಿಕೊಂಡು , ಮೊಬೈಲ್ ಸ್ವಿಚ್ ಆಫ್ ಮಾಡಿ,(ಇಲ್ಲದಿದ್ದರೆ ಬಿ ಎಮ್ ಸಿ ಯವರದ್ದು ಗಡಿ ಗಡಿ ಫೋನ್ ಬರುತಿತ್ತಂತೆ ) ೩ ದಿನ ದ ನಂತರ ಅವರು ಬೇರೆ ಕಡೆ ಚೆಕ್ ಅಪ್ ಮಾಡಿಸಿದಾಗ ಅವರಿಗೆ ನೆಗೆಟಿವ್ ವರದಿ ಬಂತು. ಆ ೩ , ೪ ದಿನ ದಲ್ಲಿ ಅವರು ಪಟ್ಟ ವೇದನೆ , ಕಷ್ಟ, ಖರ್ಚು ಗಳಿಗೆ ಯಾರು ಹೊಣೆ..?
ಎಲ್ಲಾ ಕಡೆ ಇದೇ ಅವಾಂತರ..

ಕೆಲವರು ಹೇಳುತ್ತಾರೆ ಇದು ಹೋಟೆಲ್ ಮಾಲೀಕರು ಹಾಗೂ ಕಾರ್ಮಿಕರ ಭವಿಷ್ಯ ದ ಪ್ರಶ್ನೆ ಎಂದು.
ನನ್ನ ಪ್ರಕಾರ ಅಲ್ಲ…
ಒಂದು ಹೋಟೆಲ್ ಚಾಲನೆ ಯಲ್ಲಿದ್ದರೆ ಅದಕ್ಕೆ ಸಾಮಗ್ರಿ ಒದಗಿಸುವ ಎಲ್ಲರ ಹೊಟ್ಟೆಯೂ ತುಂಬುತ್ತದೆ.
ಇಲ್ಲದಿದ್ದರೆ ಎಲ್ಲರ ಹೊಟ್ಟೆಗೂ ತಣ್ಣೀರ ಬಟ್ಟೆ ಯೇ ಗತಿ.
ಉದಾಹರಣೆಗೆ ಹೋಟೆಲ್ ಗೆ ಹಾಲು ಹಾಕುವವನಿಂದ ಹಿಡಿದು ಪನ್ನೀರ್ ನವನು , ಬಟರ್ , ಚೀಸ್ ನವ , ಫ್ರೂಟ್ಸ್ ನಾವು, ಬಾಜಿಯವನು, ಕೊಯಲ್ ನವನು, (ಇದ್ದಿಲು) ಐಸ್ ಕ್ರೀಮ್ ನವನು, ನ್ಯಾಪ್ ಕೀನ್ ಪೇಪರ್ ನವ , ಪಾರ್ಸೆಲ್ ಬ್ಯಾಗ್ ಕೊಡುವವ ,ವಾಶಿಯ ವ್ಯಾಪಾರಿ ಗಳು, ಕಿರಾಣಿ ಅಂಗಡಿಯವ, ಮಸಾಲೆ ಪದಾರ್ಥಗಳನ್ನು ಪೂರೈಸುವ , ನೀರು , ಕೊಲ್ಡ್ ಡ್ರಿಂಕ್ಸ್ ಹಾಕುವವರು , ಪಾತ್ರೆಗಳನ್ನು ಪೂರೈಸುವರು, ಎಣ್ಣೆ ಅಂಗಡಿ ಯವರು, ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವವರು , ಚಾಹುಡಿ ಅಂಗಡಿ ಯವರು, ಚಪಾತಿ ಯವನು, ಬ್ರೆಡ್, ಪಾವು ಹಾಕುವವರು, ಲಾಂಡ್ರಿ ಯವ, ಯುನಿಫಾರ್ಮ್ ನವ ,ಐಸ್ ನವ , ಕಾಂದ , ಬಟಾಟೆ ಯವ, ತೆಂಗಿನ ಕಾಯಿ ಹಾಕುವವರು, ಎಲೆಕ್ಟ್ರಾನಿಕ್ ನವರು, ಗ್ರಾಂಡರಿಗೆ ಚೆನ್ ಹಾಕುವವರು, ಚಾಕುಧಾರ್ ನವ , ಹ್ಯಾಂಡ್ ವಾಷ್, ಫಿನಾಯಿಲ್ ನವರು, ಹೂ,ಹಾರ ಹಾಕುವವರು, ಲಾದಿ , ಡೆಸ್ಟರ್ನವರು, ಮೆನು ಕಾರ್ಡ್ ನವರು, ಬಿಲ್ ಮೆಷಿನ್ ನವರು , ಸುಗಿ , ಜೋಮ್ಯಾಟೊ ಮುಂತಾದ ಆನ್ಲೈನ್ ಡೆಲಿವರಿಯವರು, ಬೀಎಸ್ಸ್ ಎನ್ಲ್ ಕಂಪೆನಿಯವರು , ಮೊಬೈಲು ಕಂಪೆನಿ ಗಳು , ಬಲು ಮುಖ್ಯ ವಾಗಿ ಎಲ್ಲಾ ಹೊಟೇಲಿಗರು ವ್ಯವಹಾರ ಕ್ಕಾಗಿ ಬ್ಯಾಂಕ್ ಖಾತೆ ಹೊಂದಿರುತ್ತಾರೆ. ಆ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ನಮ್ಮವರ ಕೊಡುಗೆಯೇ ಸಾಕಷ್ಟಿದೆ. ಆದರೆ ಈಗ ಎಲ್ಲಾ ಟ್ರಾನ್ಸೈಕ್ಷನ್ ಬಂದ್ ಆಗಿವೆ.

ಬಾರ್ ನವರಾದ್ರೆ ಲಿಕ್ಕರ್ ನವರು , ಮಾಂಸ ದವ, ಮೀನು ನವ, ಮೊಟ್ಟೆ ಯವ, ಚಕ್ ಣ ದವ ಹೀಗೆ ಇನ್ನೂ ಅನೇಕ ರು ಈ ಹೊಟೇಲು ಉದ್ಯಮ ವನ್ನು ಅವಲಂಬಿಸಿರುತ್ತಾರೆ. ಈಗ ಎಲ್ಲರೂ ಹಾಹಾಕಾರ ಪಡುವ ಸ್ಥಿತಿ ನಿರ್ಮಾಣವಾಗಿದೆ. ಬಹುಶಃ ಇಷ್ಟು ಜನರ ಲಿಂಕ್ ಇರುವ, ಇಷ್ಟು ಮಂದಿಯ ಹೊಟ್ಟೆ ತುಂಬುವ ಏಕೈಕ ಉದ್ಯಮ ಇದು

ಬೇರೆ ಯಾವುದೇ ಕಂಪೆನಿ ಯವರಾದ್ರೆ ಒಮ್ಮೆ ಕಚ್ಚಾ ಸಾಮಗ್ರಿ ಕೊಟ್ಟರೆ ಇನ್ಯಾವತ್ತೋ ಆರ್ಡರ್ ದೊರೆಯುತ್ತದೆ. ಆದರೆ ನಮ್ಮ ಈ ಹೋಟೆಲ್ ಉದ್ಯಮ ದಿನನಿತ್ಯದ ಉದ್ಯಮ, ವಹಿವಾಟು.

ಆದರೆ ಈಗ ಈ ಬಂದ್ ನಿಂದಾಗಿ ಮಾಲೀಕರು , ಕಾರ್ಮಿಕರು, ಮಾಲು ಪೂರೈಕೆ ದಾರರು ಮಾತ್ರವಲ್ಲ, ದಿನಾಲು ಹೊರಗೆ ಉಣ್ಣುವವರು ತುಂಬಾ ಕಷ್ಟದಲ್ಲಿ ಸಿಲುಕಿದ್ದಾರೆ. ಅವರಿಗೆ ಬೇರೆ ಯಾವುದೇ ಆಪ್ಷನ್, ಯಾ ಚೂಸ್ ಇಲ್ಲ .

ಬಹುಶಃ ಹಣ ಕೊಟ್ಟು ಕೂಡ ಉಂಡು ಹೊರಗೆ ಹೋಗು ವಾಗ Thank u ಎಂದು ಮನಃಪೂರ್ವಕವಾಗಿ ಕೌಂಟರ್ ನಲ್ಲಿ ಹೇಳಿ ಹೊಗುವ ಏಕೈಕ ಜಾಗವೂ ಇದೇ ಆಗಿರಬಹುದು. ಅಷ್ಟು ಧನ್ಯತಾಭಾವ ಅವರದಾಗಿರುತ್ತದೆ.

ಈ ಹೋಟೆಲ್ ನಲ್ಲಿ ಕಸ್ಟಮರ್ (ಗೆಸ್ಟ್ ) ನವರಿಗೆ ಗೊತ್ತಾಗದ ರೀತಿಯಲ್ಲಿ ಕೆಲವು ಶಬ್ದಗಳನ್ನು ಹೋಟೆಲ್ ನವರೇ ಕಂಡು ಹಿಡಿದಿದ್ದಾರೆ..
ಏ.ಸಿ ಗೆ ಚಪ್ಪೆ ಆಪಿನ, ಫ್ಯಾನ್ ಗೆ ತಿರುಗುನ, ರೊಟ್ಟಿ ಯವನಿಗೆ ತಟ್ಟುವವ ,ಮಾಲ್ ಮಾಡುವವವನಿಗೆ ತಿರುಗಿಸುವವ , ಹೀಗೆ ಅನೇಕ ಹಾಸ್ಯ ಮಯ ಶಬ್ದ ಗಳಿವೆ.

ಕೆಲವು ಹೊಟೇಲು ಗಳಲ್ಲಿ ಯಾವ ಮಂದಿರಕ್ಕೂ ಕಡಿಮೆ ಇಲ್ಲದಂತೆ ಭಜನೆ, ಪೂಜೆ ಮಾಡುತ್ತಾರೆ.
ಕೆಲವರು ಹೊಟೇಲಿನಲ್ಲಿ ಕೆಲಸ ವೆಂದು ಹೇಳಲು ನಾಚಿಕೆ ಪಟ್ಟುಕೊಳ್ಳುತ್ತಾರೆ . ಅದು ತಪ್ಪು , ನಾಲ್ಕು ಜನ ರ ಹೊಟ್ಟೆ ತುಂಬಿಸುವುದು ಇದು ಪುಣ್ಯ ದ ಕೆಲಸ.
ಈ ಹೋಟೆಲ್ ಉದ್ಯಮ ದವರು ದಾನ ಧರ್ಮ ಗಳಲ್ಲಿಯೂ ಎತ್ತಿ ದ ಕೈ.

ಅಕ್ಕ ಪಕ್ಕ ಎಲ್ಲಿಯೂ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿದ್ದರೂ ಇವರ ಒಂದು ಬ್ಯಾನರ್ ಅಲ್ಲಿ ಇರದೆ ಇಲ್ಲ .
ಅಂಬೇಡ್ಕರ್ ಜಯಂತಿ, ಶಿವ ಜಯಂತಿ, ಅಥವಾ ಇನ್ಯಾವುದೋ ಜಯಂತಿ ಬರಲಿ. ಅವರು ಚಂದ ಕೇಳಲು ಬರುವುದು ಹೋಟೆಲ್ ಗೇ…

ಆದರೆ ಈಗ ಈ ಸಂಕಷ್ಟ ಪರಿಸ್ಥಿತಿ ಯಲ್ಲಿ ನಮ್ಮವರಿಗೆ ಯಾರೂ ಇಲ್ಲ.

ಎಲೆಕ್ಷನ್ ಬಂದರೆ ಎಲ್ಲಾ ಪಾರ್ಟಿ ಯವರು ಫಂಡ್ ಗಾಗಿ ಬರುವುದು ಈ ಹೋಟೆಲ್ ನವರ ಹತ್ತಿರವೇ…ಅಣ್ಣಾಅಣ್ಣ ಎಂದು.
ಓಟು ಮುಗಿದಾಗ ಸೊತವ ಹೇಗೂ ಮುಖ ತೋರಿಸುವುದಿಲ್ಲ…..ಗೆದ್ದವನ ಹತ್ತಿರ ಮಾತಾಡಲು ಲೈಸೆನ್ಸ್ ತೊಗಬೇಕು. ಆಗ ಯಾವ ಅಣ್ಣಾ ನ ಪರಿಚಯ ವೂ ಇವರಿಗಿರುವುದಿಲ್ಲ. ನಾವು ಕಮಂಗಿಗಳಾಗುತ್ತೆವೆ.

ಊರಿನ ಲ್ಲಿ ಜಾತ್ರೆ, ಕೋಲ , ಮದುವೆ ,ಮಂಜಿ ಗೆಲ್ಲಾ ದೊಡ್ಡ ದೇಣಿಗೆ ನಮ್ಮ ಮುಂಬೈ ,ಪೂನಾ , ಮಹಾರಾಷ್ಟ್ರ ದ ಹೊಟೆಲಿಗರದ್ದು.. ಇದು ಜಂಬವಲ್ಲ.. ನಮ್ಮ ವರು ಎಂಬ ಹೆಮ್ಮೆ.
ಪರಿಸ್ಥಿತಿ ಇದೆ ರೀತಿ ಯಾದ್ರೆ ಕೊಡುದೆಲ್ಲಿಂದ..?
ನಾವು ಉಣ್ಣುದೆಲ್ಲಿಂದ..?

ಯಾವುದಕ್ಕೂ ಒಂದು ಪರಿಮಿತಿ, ಲಿಮಿಟ್ ಅಂತ ಇರುತ್ತದೆ.
ಆ ಲಿಮಿಟ್ ಕ್ರಾಸ್ ಮಾಡಿದರೆ ಆಗಬಾರದ್ದು ಆಗುತ್ತದೆ.. ಬಹುಶಃ ಇದಕ್ಕೆ ಇರಬೇಕು..
ಸರ್ಕಾರ ಬಂದ ಹೊಸತರಲ್ಲಿ ಉದ್ಯೋಗ ವಕಾಶವನ್ನು ಹೆಚ್ಚು ಮಾಡಲೊಸ್ಕರ ಇನ್ನು ಮುಂದೆ ಮುಂಬೈ ಮಹಾನಗರ ದಿನದ ೨೪ ಗಂಟೆ ಯೂ ಚಾಲು ಇರಲಿದೆ, ನಿದ್ರಿಸದ ನಗರ ಎಂದು ಘೋಷಿಸಿ ಪ್ರಾಯೊಗಿಕವಾಗಿ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್, ಚರ್ಚ್ ಗೇಟ್, ಸೀ ಎಸ್ ಟಿ ಕೆಲವು ಕಡೆ ೨೪ ಗಂಟೆ ಯೂ ಚಾಲು ಇಡಲು ಪರ್ಮೀಶನ್ ಕೊಟ್ಟಿತ್ತು. ಸ್ವಲ್ಪ ಸಮಯದಲ್ಲೇ ಸಂಪೂರ್ಣ ಲಾಕ್ ಡೌನ್ ಆಗಿ ೩೪ ಬಿಟ್ಟು ೧ ಗಂಟೆ ಯೂ ಚಾಲು ಆಗದ ಹಾಗೆ ಆಯ್ತು.

(ಇನ್ನು ಕೆಲವರು ಹೊಟೇಲಿನ ಒಳಗಡೆ ಕೋಲ ಮಾಡಿದರು.)

ಎಲ್ಲಾರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂದು..
ಬಟ್ಟೆ ಆದರೆ ಕೆಲವು ದಿನ ತೊಡಬಹುದು.. ಆದ್ರೆ ಹೊಟ್ಟೆ ಕೇಳಬೇಕಲ್ಲ..ಅದು ಹೊತ್ತು ಹೊತ್ತಿಗೆ ಕೇಳುತ್ತಿರುತ್ತದೆ‌‌… ಎಲ್ಲಿ ನನ್ನ ಆಹಾರ ಎಂದು..
ಆದರೆ ಈಗಿನ ಪರಿಸ್ಥಿತಿಯಲ್ಲಿ ಅದೂ ಕಷ್ಟ. ಹೊಟೇಲು ಚಾಲು ಇಲ್ಲದಿದ್ದರೆ ಜನರು ಉಣ್ಣುದಾದರೂ ಎಲ್ಲಿಂದ..?

ಆದರೆ ಕಾಲ ಒಂದೇ ರೀತಿ ಇರುವುದಿಲ್ಲ..ಚಕ್ರ ತಿರುಗಿದಂತೆ ನಮಗೂ ಅಚ್ಚೇ ದಿನ್ ಬರಬಹುದು.
ನಾವು ನಂಬಿದ ದೈವ , ದೇವರು
ಅಲ್ಲದೆ ಹಸಿದವರ ಹೊಟ್ಟೆ ತುಂಬುವ ಪುಣ್ಯ ಕಾರ್ಯ ಮಾಡುವ ಹೊಟೇಲು ಗಳ ಗ್ರಾಹಕರು ಉಂಡು ಹೋಗುವಾಗ ಪ್ರೀತಿ ಯಿಂದ ಹರಿಸಿ ಆಶೀರ್ವಾದ ಮಾಡಿದ ಆ ಪುಣ್ಯ ದ ಫಲ ಎಲ್ಲೂ ಹೊಗಲಿಕ್ಕಿಲ್ಲ.
ಸ್ವಲ್ಪ ದಿನ ದಲ್ಲೇ ಈ ಎಲ್ಲಾ ಅವಾಂತರ ಕೊನೆಗೊಂಡು ಹಿಂದಿನ ಗತವೈಭವ ಮರುಕಳಿಸಬಹುದು‌.
ಹೊಟೇಲಿಗರು ನೆಮ್ಮದಿಯ ನಿಟ್ಟುಸಿರು ಬಿಡಬಹುದು.

ಸತೀಶ್ ಎಮ್ ಶೆಟ್ಟಿ ಕಣಂಜಾರು