October 27, 2021

ಉದಯಪ್ರಭ

ಹೊಸ ಹುರುಪಿನ ಸಂಭ್ರಮ

Bring back Rohini ಡಿಸಿಯನ್ನಾಗಿ ಮರು ನೇಮಕಕ್ಕೆ ಒತ್ತಾಯಿಸಿ ಸಹಿ ಸಂಗ್ರಹ

ಮೈಸೂರು :
ರೋಹಿಣಿ ಸಿಂಧೂರಿ ಅವರನ್ನು ಮತ್ತೆ ಮೈಸೂರು ಜಿಲ್ಲಾಧಿಕಾರಿಯನ್ನಾಗಿ ಮರುನೇಮಕ ಮಾಡಬೇಕು ಎಂದು ಆಗ್ರಹಿಸಿ ಇದೀಗ ಆನ್ ಲೈನ್ ನಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ. ಚೇಂಜ್ ಆರ್ಗ್ ಹೆಸರಿನಡಿ ಬ್ರಿಂಗ್ ಬ್ಯಾಕ್ ರೋಹಿಣಿ ಎಂಬ ಹೆಸರಲ್ಲಿ ಸಹಿ ಸಂಗ್ರಹ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ.


35 ಸಾವಿರಕ್ಕೂ ಹೆಚ್ಚು ಜನ ಸಹಿ ಮಾಡಿದ್ದಾರೆ.
ಜತೆಗೆ ರೋಹಿಣಿ ಸಿಂಧೂರಿ ಹೆಸರಿನಲ್ಲಿ ವಾಟ್ಸ್ ಆ್ಯಪ್ ಗ್ರೂಪ್ ಗಳನ್ನು ಅವರ ಅಭಿಮಾನಿಗಳು ಸ್ವಯಂ ಪ್ರೇರಿತವಾಗಿ ಕರೆದು ರೋಹಿಣಿ ಪರ ಅಭಿಯಾನ ನಡೆಸುತ್ತಿದ್ದಾರೆ.
ಒಟ್ಟಾರೆ ಬೆಳವಣಿಗೆಯಲ್ಲಿ ರೋಹಿಣಿ ಪರ ರಾಜ್ಯಾದ್ಯಂತ ಕಳೆದೊಂದು ವಾರದ ಅವಧಿಯಲ್ಲಿ ಬೆಂಬಲ ಗಳ ಮಹಾಪೂರವೇ ಹರಿದು ಬರುತ್ತಿರುವುದು ವಿಶೇಷವಾಗಿದೆ.