ಬೆಂಗಳೂರು: ಬಂಗಾರದ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಮೊದಲ ಬಾರಿ 10 ಗ್ರಾಂ ಚಿನ್ನದ (24 ಕ್ಯಾರೆಟ್ ಗೋಲ್ಡ್) ದರ ಈ 71 ಸಾವಿರ ದಾಟಿದೆ. ಹೀಗಾಗಿ ಖರೀದಿ ಪ್ರಮಾಣವನ್ನು ಕಡಿಮೆಗೊಳಿಸುವ ಅನಿವಾರ್ಯತೆ ಗ್ರಾಹಕರಿಗೆ ಎದುರಾಗಿದೆ.

ಕಳೆದ ಹತ್ತು ದಿನಗಳಲ್ಲಿ ಬಂಗಾರದ ₹ 3500-4000 ಹೆಚ್ಚಳವಾಗಿದ್ದು, ಈ ನಡುವೆ ಎರಡು ಬಾರಿ ಮಾತ್ರ ಅಲ್ಪ ಇಳಿಕೆ ಕಂಡಿತ್ತು. ಯುಗಾದಿಗೆ ಹಬ್ಬಕ್ಕೆ ಒಂದೆರಡು ದಿನ
ಬಾಕಿ ಇರುವಾಗ ಬಂಗಾರ ದರ ಜನತೆಯ ತಲೆ ತಿರುಗಿಸುತ್ತಿದೆ.

ಬೆಂಗಳೂರಲ್ಲಿ ಶುಕ್ರವಾರ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 64,150 ಇತ್ತು. ಶನಿವಾರ 65,350 ತಲುಪಿದೆ.

ಅದೇ ರೀತಿ 24 ಕ್ಯಾರೆಟ್ ನ 10 ಗ್ರಾಂ ಬಂಗಾರದ ಬೆಲೆ ಶುಕ್ರವಾರ ಈ 69,980 2. 2 71,290 ದಾಟಿತು. ಶುಕ್ರವಾರ ಒಂದು ಕೇಜಿಗೆ ಈ 80300 ಇದ್ದ ಬೆಳ್ಳಿ ಶನಿವಾರ ರೂ.82,400 ಗೆ ಏರಿಕೆಯಾಗಿದೆ.