ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ನ 11 ರೈಲುಗಳಿಗೆ ಸೆ. 15ರಂದು ಜೆಮ್‌ಶೆಡ್‌ಪುರದಲ್ಲಿ ಚಾಲನೆ ನೀಡಲಿದ್ದಾರೆ.

ಹುಬ್ಬಳ್ಳಿ-ಬೆಳಗಾವಿ-ಪುಣೆ, ಪುಣೆ- ನಾಗ್ಪುರ, ಗಯಾ-ಹೌರಾ, ಬಾಗಲ್‌ಪುರ-ಹೌರಾ, ನಾಗ್ಪುರ-ಸಿಕಂದರಾಬಾದ್, ಆಗ್ರಾ-ಬನಾರಸ್, ರಾಯಪುರ-ವಿಶಾಖಪಟ್ಟಣ, ಟಾಟನಗರ-ಪಟ್ನಾ, ದಿಯೋಘರ್-ವಾರಾಣಸಿ ಮತ್ತು ಟಾಟನಗರ-ಬೃಹಂಪುರ(ಒಡಿಶಾ) ಮಾರ್ಗಗಳಲ್ಲಿ ನೂತನ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸಲಿವೆ.

ವಾರಾಣಸಿ-ದೆಹಲಿ ಮಾರ್ಗದಲ್ಲಿ ಪ್ರಸ್ತುತ ಸಂಚರಿಸುತ್ತಿರುವ 16 ಬೋಗಿಗಳ ವಂದೇಭಾರತ್‌ ರೈಲಿನ ಬದಲಾಗಿ 20 ಬೋಗಿಗಳ ನೂತನ ವಂದೇ ಭಾರತ್ ರೈಲಿಗೂ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.