ಕೊಪ್ಪಳ : ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ಜ.15ರಂದು ನಡೆಯಲಿದೆ. ಸುಮಾರು 12 ಲಕ್ಷ ಜಿಲೇಬಿಗಳ ತಯಾರಿಗೆ ಸಿಂಧನೂರಿನ ಸಮಾನ ಮನಸ್ಕರ ಗೆಳೆಯರ ಬಳಗದ ತಂಡ ಭರದ ಸಿದ್ದತೆ ನಡೆಸಿದೆ. 120 ಕ್ವಿಂಟಲ್‌ನಷ್ಟು 12 ಲಕ್ಷ ಜಿಲೇಬಿಗಳನ್ನು ಜಾತ್ರೆಗೆ ಕಳುಹಿಸಲು ಸಿದ್ಧತೆ ನಡೆದಿದೆ. ಇದಕ್ಕಾಗಿ ಜ.14 ರಂದು ಬೆಳಗ್ಗೆ 5 ರಿಂದ ಜ.15 ರ ರಾತ್ರಿವರೆಗೆ ನಿರಂತರವಾಗಿ ಮಠದ ಪಕ್ಕದ ವಿಶಾಲವಾದ ಜಾಗದಲ್ಲಿ ಜಿಲೇಬಿ ತಯಾರಿಸಲಾಗುತ್ತಿದೆ.