This is the title of the web page
This is the title of the web page

Live Stream

March 2023
S M T W T F S
 1234
567891011
12131415161718
19202122232425
262728293031  

| Latest Version 9.4.1 |

State News

ಡಿ.3 ಮತ್ತು 4 ರಂದು ಪ್ರಥಮ ಅಂತರರಾಷ್ಟ್ರೀಯ ಜಿನ ಸಮ್ಮೇಳನ 

Join The Telegram Join The WhatsApp

ಬೆಳಗಾವಿ-

ಜೈನ ಸಮಾಜದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಮುಂಚೂಬಿಣಿಯಲ್ಲಿರುವ ಸುಹಾಸ್ತಿ ಯುವ ಜೈನ ಮಿಲನ ಬೆಂಗಳುರು ಹಾಗೂ ಜೈನ ಮಿಲನ ದುಬೈ ವಲಯ ಇವರ ಸಂಯುಕ್ತಾಶ್ರಯದಲ್ಲಿ ಇದೇ ಡಿಸೆಂಬರ 3 ಮತ್ತು 4 ರಂದು ದುಬೈನಲ್ಲಿ ಪ್ರಥಮ ಅಂತರರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸುಹಾಸ್ತಿ ಜೈನ ಮಿಲನ ಅಧ್ಯಕ್ಷ ಪುಟ್ಟಸ್ವಾಮಿ ಕೆ.ಡಿ. ಅವರು ಇಂದಿಲ್ಲಿ ಹೇಳಿದರು.

ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸುಹಾಸ್ತಿ ಜೈನ ಮಿಲನ ಸಂಘಟನೆಯು ಕಳೆದ ಏಳು ವರ್ಷಗಳಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ಜಿನ ಸಮ್ಮೇಳನವನ್ನು ಆಯೋಜಿಸುತ್ತ ಬಂದಿದ್ದು, ಈ ಸಮ್ಮೇಳನದ ಮೂಲಕ ಸಮಾಜದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆ ನಡೆಸಲಾಗುತ್ತದೆ ಎಂದು ಅವರು ಹೇಳಿದರು.

ಇದೇ ಮೊದಲ ಬಾರಿಗೆ ಜಿನ ಸಮ್ಮೇಳನವನ್ನು ಹೊರ ದೇಶ ದುಬೈನ ಜೆ.ಎಸ್.ಎಸ್.ಪ್ರೈವೆಟ ಸ್ಕೂಲ ಅಲ ಸಫಾ ದುಬೈ ಇಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಈ ಸಮ್ಮೇಳನಕ್ಕೆ ಭಾರತ ಸೇರಿದಂತೆ ಆಸ್ಟ್ರೇಲಿಯಾ, ಇಂಗ್ಲೆಂಡ, ಅಮೇರಿಕಾ , ಕೆನಡಾ, ಜರ್ಮನಿ , ದುಬೈ ಸೇರಿದಂತೆ ಇನ್ನುಳಿದ ದೇಶಗಳಿಂದ ಪ್ರತಿನಿಧಿಗಳು ಈ ಜಿನ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಈ ಸಮ್ಮೇಳನದಲ್ಲಿ ಧಾರ್ಮಿಕ ಚರ್ಚೆ ಮತ್ತು ಸಮಾಜ ಅಭಿವೃದ್ದಿಯ ಚಿಂತನಾ ಚರ್ಚೆಗಳು ನಡೆಯಲಿವೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾಳ ಹರ್ಷೇಂದ್ರ ಜೈನ ಅವರು ಮಾತನಾಡಿ, ಡಿ. 3 ರಂದು ಸಾಯಂಕಾಲ 6 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ನಾಡಿನ ಖ್ಯಾತ ವಿದ್ವಾಂಸ, ಜೈನ ಸಾಹಿತಿ ಮತ್ತು ಸಂಶೋಧಕರಾದ ನಾಡೋಜ ಡಾ. ಹಂಪಾ ನಾಗರಾಜಯ್ಯ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾರತೀಯ ಜೈನ ಮಿಲನ ರಾಷ್ಟ್ರೀಯ ಉಪಾಧ್ಯಕ್ಷರಾದ ಅನಿತಾ ಸುರೇಂದ್ರಕುಮಾರ, ಎನ್,.ಪ್ರಸನ್ನ ಕುಮಾರ, ಮಾಜಿ ಸಚಿವ ಅಭಯಚಂದ್ರ ಜೈನ, ಉದ್ಯಮಿ ನಿರಂಜನ ಜೈನ ಜಲವಳ್ಳಿ , ಜೈನ ಮಿಲನ ವಲಯ-8 ರ ಅಧ್ಯಕ್ಷ ಪುಷ್ಪರಾಜ ಜೈನ, ಹಿರಿಯ ಪೋಲಿಸ ಅಧಿಕಾರಿ ಜಿನೇಂದ್ರ ಖನಗಾಂವಿ ಇವರು ಆಗಮಿಸಲಿದ್ದಾರೆ. ಜೈನ ಮಿಲನ ದುಬೈ ವಲಯದ ಅಧ್ಯಕ್ಷ ಸಂದೇಶ ಜೈನ ಅಂಗಡಿಬೆಟ್ಟು, ಸುಹಾಸ್ತಿ ಜೈನ ಯುವ ಮಿಲನ ಅಧ್ಯಕ್ಷ ಪುಟ್ಟಸ್ವಾಮಿ ಕೆ.ಡಿ. ದುಬೈ ಜೈನ ಸಮಾಜದ ಮುಖಂಡ ಪಿ.ದೇವಕುಮಾರ ಕಂಬಳಿ, ಸಮಾಜ ಸೆÉವಕರಾದ ಮಾಳ ಹಷೇಂದ್ರ ಜೈನ, ವಿಮಲ ತಾಳಿಕೋಟಿ, ಶ್ವೇತಾ ಜೈನ ಇವರು ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಿಹಂನಗದ್ದೆ ಬಸ್ತಿ ಮಠ ನರಸಿಂಹರಾಜಪುರ ಮಠದ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿಗಳು ಸಾನಿಧ್ಯ ವಹಿಸಿ ಆರ್ಶಿವಚನ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಅಂದು ಪದ್ಮಪ್ರಸಾದ ಜೈನ ಅವರು ರಚಿಸಿದ ಜೈನ ಸಾಹಿತ್ಯ ಚರಿತ್ರೆ ಮತ್ತು ಜಯಲಕ್ಷ್ಮೀ ಅಭಯಕುಮಾರ ಅವರು ರಚಿಸಿದ ಸ್ವಾತಂತ್ರ್ಯಯೋಧ ಎಂ.ಡಿ.ಅಧಿಕಾರಿ ಪುಸ್ತುಕಗಳನ್ನು ಬಿಡುಗಡೆ ಮಾಡಲಾಗುವುದು . ಇದರ ಜೊತೆಗೆ ನೆರೆಂಕಿ ಪಾಶ್ರ್ವನಾಥ ಅವರ ವೆಬ್‍ಸೈಟನ್ನು ಸಹ ಬಿಡುಗಡೆ ಮಾಡಲಾಗುವುದು. ಒಟ್ಟು ಈ ಸಮ್ಮೇಳನಕ್ಕೆ ಭಾರತ ದೇಶದಿಂದ 278 ಜನರು ತಮ್ಮ ಹೆಸರು ನೋಂದಾಯಿಸಿದ್ದಾರೆ. ಅದರಂತೆ ವಿದೇಶದಿಂದ 250 ಹಾಗೂ ದುಬೈ ಸ್ಥಳೀಯದಿಂದ ಸೇರಿ ಒಟ್ಟಾರೆ 600 ಜನರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಜಿನೇಂದ್ರ ಚಿತ್ತಾ ಅವರು ಮಾತನಾಡಿ, ಡಿ. 4 ರಂದು ಬೆಳಿಗ್ಗೆ 9 ಗಂಟೆಯಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜೈನ ಧರ್ಮದ ಕ್ವಿಜ್, ಗೇಮ ಪ್ರೋಗ್ರಾಮ್, ಜೈನಿಸಂ ಫಾರ ಟ್ರೂತ ವಿಷಯ ಮೇಲೆ ಸಮಾಲೋಚನೆ ಮತ್ತು ಸಮ್ಮಿಲನ ಅವಾರ್ಡ ವಿತರಣೆ ಕಾರ್ಯಕ್ರಮಗಳ ಜೊತೆ ಡಾ. ಸ್ನೇಯಶ್ರೀ ನಿರ್ಮಲ ಕುಮಾರ ಅವರಿಂದ ಸಂಗೀತ ಕಾರ್ಯಕ್ರಮ, ಜೈನ ಮಿಲನ ದುಬೈ ವತಿಯಿಂದ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಗುಂಪು ಹಾಡುಗಾರಿಕೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಭರತೇಶ ಶಿಕ್ಷಣ ಸಂಸ್ಥೆಯ ನಿರ್ದೇಶಕ ವಿನೋದ ದೊಡ್ಡಣ್ಣವರ, ವಜ್ರಕುಮಾರ, ವಿಮಲ ತಾಳಿಕೊಟಿ, ಪ್ರಚಾರ ಸಮಿತಿ ಸದಸ್ಯ ಕುಂತಿನಾಥ ಕಲಮನಿ, ಅಭಯ ಅವಲಕ್ಕಿ, ಪದ್ಮರಾಜ ವೈಜನ್ನವರ, ಪವನಕುಮಾರ ಉಪ್ಪಿನ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

 


Join The Telegram Join The WhatsApp
Admin
the authorAdmin

Leave a Reply