Join The Telegram | Join The WhatsApp |
ಬೆಂಗಳೂರು-
ರಾಜ್ಯದ ಪ್ರತಿ ತಾಲೂಕಿನಲ್ಲಿ ಎರಡರಂತೆ ಪಿಎಂ ಶ್ರೀ ಶಾಲೆಗಳನ್ನು ( PM SHRI School ) ಆರಂಭಿಸಲು ಉದ್ದೇಶಿಲಾಗಿದೆ ಎಂಬುದಾಗಿ ಸಮಗ್ರ ಶಿಕ್ಷಣ ಕರ್ನಾಟದ ನಿರ್ದೇಶಕರು ತಿಳಿಸಿದ್ದಾರೆ.ಈ ಕುರಿತಂತೆ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು, ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಿಗೆ ಪತ್ರವನ್ನು ಬರೆದಿದ್ದಾರೆ. ಅದರಲ್ಲಿ ಕೇಂದ್ರ ಸಚಿವ ಸಂಪುಟವು ಕೇಂದ್ರ ಪ್ರಾಯೋಜಿತ ಹೊಸ ಯೋಜನೆ PM SHRi – PM School For Rising India ಗೆ ಸಂಪುಟದ ಅನುಮೋದನೆ ದೊರೆತಿದೆ. ದೇಶಾದ್ಯಂತ ಎನ್ ಪಿಇ 2020ರ ಎಲ್ಲಾ ಘಟಕಗಳನ್ನು ಅನುಷ್ಛಾನಗೊಳಿಸಲು 14,500ಕ್ಕೂ ಹೆಚ್ಚು ಶಾಲೆಗಳನ್ನು PM SHRI ಶಾಲೆಗಳಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದಿದ್ದಾರೆ.
Join The Telegram | Join The WhatsApp |