Join The Telegram | Join The WhatsApp |
ಬೆಂಗಳೂರು-
ಮಾರ್ಚ್ 2023ರ ದ್ವಿತೀಯ ಪಿ.ಯು.ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಕರಡು ಪ್ರವೇಶ ಪತ್ರಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ www.kseab.karnataka.gov.in PU EXAM PORTAL LOGIN ನಲ್ಲಿ ನೀಡಲಾಗಿರುತ್ತದೆ, ಕರಡು ಪುವೇಶ ಪತ್ರದಲ್ಲಿ ನೀಡಲಾಗಿರುವ ಪ್ರತಿ ವಿದ್ಯಾರ್ಥಿಯ ಮಾಹಿತಿಯನ್ನು ಪ್ರಾಂಶುಪಾಲರು 25.01.2023 ರೊಳಗೆ ಡೌನ್ ಲೋಡ್ ಮಾಡಿ ಖುದ್ದಾಗಿ ಪರಿಶೀಲಿಸಲು ಈ ಮೂಲಕ ಸೂಚಿಸಿದೆ. ಕರಡು ಪ್ರವೇಶ ಪತ್ರಗಳಲ್ಲಿ ನೀಡಲಾಗಿರುವ ವಿದ್ಯಾರ್ಥಿಗಳ ಮಾಹಿತಿಗಳಲ್ಲಿ ತಿದ್ದುಪಡಿಗಳಿದ್ದಲ್ಲಿ ಕಾಲೇಜಿನ ಪ್ರಾಂಶುಪಾಲರು ಪಾಲಿಸಬೇಕಾದ ಕ್ರಮಗಳನ್ನು ಈ ಕೆಳಗಿನಂತೆ ವಿವರಿಸಿದೆ.
1. ವಿದ್ಯಾರ್ಥಿಯ ಹೆಸರು, ತಂದೆ ತಾಯಿಯ ಹೆಸರು ಲಿಂಗ, ಜಾತಿ ಹಾಗೂ .ಮಾಧ್ಯಮದಲ್ಲಿ ತಿದ್ದುಪಡಿಗಳಿದ್ದಲ್ಲಿ ಸದರಿ ಮಾಹಿತಿಗಳನ್ನು ವಿದ್ಯಾರ್ಥಿಯ SSLC ದ್ಯಂತ ಸರಿಪಡಿಸಲು UPDATE OPTION ಮೂಲಕ ಅವಕಾಶ ಅಂಕಪಟ್ಟಿಯಲ್ಲಿ ನೀಡಲಾಗಿದೆ.
2. ವಿದ್ಯಾರ್ಥಿಯ ಭಾವಚಿತ್ರದಲ್ಲಿ ಯಾವುದೇ ವ್ಯತ್ಯಾಸಗಳಿದಲ್ಲಿ, ವಿದ್ಯಾರ್ಥಿಯ ಭಾವಚಿತ್ರವನ್ನು ಮತ್ತೊಮ್ಮೆ ಅಪ್ಲೋಡ್ ಮಾಡಲು UPDATE OPTION ಮೂಲಕ ಅವಕಾಶ ನೀಡಲಾಗಿದೆ.
3. ಕರಡು ಪುವೇಶ ಪತ್ರ ಬಂದಿರುವ ವಿದ್ಯಾರ್ಥಿಗಳ ಪಟ್ಟಿಯಿಂದ ಯಾವುದೇ ವಿದ್ಯಾರ್ಥಿಯ ಹೆಸರನ್ನು ಡಿಲೀಟ್ ಮಾಡಲು REMOVE OPTION ಮುಖಾಂತರ ಸೂಕ್ತ ಕಾರಣ DISCONTINUED ಇತ್ಯಾದಿ) ವನ್ನು ನಮೂದಿಸಿ ಡಿಲೀಟ್ ಮಾಡುವುದು.
4. ಕರಡು ಪ್ರವೇಶ ಪತ್ರದ ಪಟ್ಟಿಯಲ್ಲಿ ಯಾವುದೇ ವಿದ್ಯಾರ್ಥಿಯ ಮಾಹಿತಿಯು ಬಂದಿಲ್ಲದಿದ್ದಲ್ಲಿ ಅಥವಾ ವಿದ್ಯಾರ್ಥಿಯ ಕರಡು ಪವೇಶ ಪತ್ರದಲ್ಲಿ ವಿಷಯ ತಿದ್ದುಪಡಿ, ಸಂಯೋಜನೆ ತಿದ್ದುಪಡಿಗಳಿದ್ದಲ್ಲಿ, ಸೂಕ್ತ ದಾಖಲೆಗಳೊಂದಿಗೆ(ಪ್ರಥಮ ಪಿ.ಯು.ಸಿ ಅಂಕಪಟ್ಟಿ, ಜಿಲ್ಲಾ ಉಪನಿದೇಶಕರು ಅನುಮೂದಿಸಿರುವ ರಿಸಲ್ಟ್ ಶೀಟ್, SATS Checklist, Covering Letter)ಗಳೊಂದಿಗೆ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರಿಗೆ ಅರ್ಜಿ ಸಲ್ಲಿಸುವುದು, ಹಾಗೂ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು ತಮ್ಮ ಜಿಲ್ಲೆಯಿಂದ ಸ್ವೀಕೃತವಾದ ಅರ್ಜಿಗಳನ್ನು ಕ್ರೋಢೀಕರಿಸಿ KSEAB ಮಂಡಲಿಯಲ್ಲಿ ಸಂಬಂಧಿಸಿದ ವಿಷಯ ನಿರ್ವಾಹಕರಿಗೆ ದಿನಾಂಕ 25.01.2023 ರೊಳಗೆ ಸಲ್ಲಿಸುವುದು.
Join The Telegram | Join The WhatsApp |