ವಾಷಿಂಗ್ಟನ್: ಬೆಂಗಳೂರು ಮೂಲದ ಸುಹಾಸ್ ಸುಬ್ರಹ್ಮಣ್ಯಂ ಅಮೆರಿಕದ ಸಂಸದರಾಗಿ ಭಗವದ್ಗೀತೆಯ ಮೇಲೆ ಪ್ರಮಾಣ ಸ್ವೀಕಾರ ಮಾಡಿದ್ದಾರೆ. ಅತ್ತ, ಇನ್ನೊಬ್ಬ ಸಂಸದರಾಗಿ ಪ್ರಮಾಣ ಸ್ವೀಕರಿಸಿದ ರಾಜಾ ಕೃಷ್ಣ ಮೂರ್ತಿ, ಈ ವೇಳೆ ಭಗವದ್ಗೀತೆಯ ಒಂದು ಭಾಗವನ್ನು ಓದಿದ್ದಾರೆ. ಈಸ್ಟ್ ಕೋಸ್ಟ್ ನಿಂದ ಆಯ್ಕೆ ಆದ ಮೊದಲ ಭಾರತೀಯ ಮೂಲದವರಾಗಿರುವ ಸುಹಾಸ್, ಈ ವರ್ಷ ಗೀತೆಯ ಮೇಲೆ ಶಪಥ ಮಾಡಿರುವ ಮೊದಲಿಗರಾಗಿದ್ದಾರೆ.