ಬೆಳಗಾವಿ :
ರಾಜ್ಯಮಟ್ಟದ ವಕೀಲರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಫರ್ಧೆ, ಡಿ. ೨೩ ರಿಂದ ೨೫ ರವರೆಗೆ ಶಿರಸಿಯಲ್ಲಿ ಜರಗುವ ವಕೀಲರ ಮೇಳ- ೨೦೨೩ ರಲ್ಲಿ ಸಂಘಟಿಸಲಾಗಿದೆ ಎಂದು ಸ್ಪಂದನಾ ಲೀಗಲ್ ಅಕಾಡೆಮಿ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಕೀಲರ ಮೇಳ- ೨೦೨೩ ರಲ್ಲಿ ಕ್ರೀಡಾ ವಿಭಾಗದಲ್ಲಿ ಪುರುಷ ವಕೀಲರಿಗೆ ಟೆನಿಸ್ ಬಾಲ್ ಕ್ರಿಕೆಟ್ ಮತ್ತು ಶೆಟಲ್ ಬ್ಯಾಡ್ಮಿಟನ್ (ಡಬಲ್ಸ್ ಮತ್ತು ಮಿಕ್ಸ್ ಡಬಲ್ಸ್) ಹಾಗೂ ಮಹಿಳಾ ವಕೀಲರಿಗೆ ಥ್ರೋಬಾಲ್ ಸ್ಫರ್ದೆಗೆ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಾಂಸ್ಕೃತಿಕ ವಿಭಾಗದಲ್ಲಿ ಪುರುಷ ಮತ್ತು ಮಹಿಳಾ ವಕೀಲರಿಗೆ ಪ್ರತ್ಯೇಕವಾಗಿ ಜಾನಪದ ಗೀತೆ, ಸುಳ್ಳು ಹೇಳುವ ಸ್ಫರ್ಧೆ, ಛದ್ಮವೇಶ ಸ್ಫರ್ಧೆ, ಹಿಂದಿ ಚಲನಚಿತ್ರ ಗೀತೆ ಅಥವಾ ಕನ್ನಡ ಚಲನಚಿತ್ರ ಗೀತೆ ಮತ್ತು ಫ್ಯಾಷನ್ ಶೋ ಸ್ಫರ್ಧೆ ಜರುಗಲಿದ್ದು ಇರುತ್ತದೆ. ಪುರುಷ ಮತ್ತು ಮಹಿಳಾ ವಕೀಲರ ತಂಡದ ಗುಂಪು ಹಾಡುವ ಸ್ಫರ್ಧೆ, ಮಹಿಳೆಯರಿಗೆ ಗುಂಪು ನೃತ್ಯ ಏರ್ಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ವಕೀಲರ ಮೇಳದ ಉದ್ಘಾಟನೆ ಡಿಸೆಂಬರ್ ೨೩ ರ ರಾತ್ರಿ ೭:೩೦ ಕ್ಕೆ ಜರುಗಲಿದ್ದು, ಬಹುಮಾನ ವಿತರಣೆಯನ್ನ ಡಿಸೆಂಬರ್ ೨೫ ರ ರಾತ್ರಿ ೯ ಗಂಟೆಗೆ ಜರುಗಲಿದೆ. ಹೆಚ್ಚಿನ ಮಾಹಿತಿಗಾಗಿ: ೯೪೪೯೧೯೩೮೦೧, ೯೧೪೧೧೮೭೮೭೪.
ಪ್ರವೇಶ ಪತ್ರ:
ಪ್ರವೇಶ್ ಪತ್ರವನ್ನ ಅಧ್ಯಕ್ಷ, ಲೀಗಲ್ ಅಕಾಡೆಮಿ ಶಿರಸಿ ಇವರಿಗೆ ನಿರ್ದಿಷ್ಟ ಪಡಿಸಿದ ಪ್ರವೇಶ ಪತ್ರದೊಂದಿಗೆ, ಡಿಸೆಂಬರ್ ೮, ೨೦೨೩ ರ ಒಳಗೆ ಕಳುಹಿಸಬೇಕೆಂದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ಕೋರಿದ್ದಾರೆ.