
ಬೆಳಗಾವಿಯ ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮ ಗೌಡ ಕಾನೂನು ಮಹಾ ವಿದ್ಯಾಲಯದಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಶ್ರೀ ಉಮೇಶ್ ಎಂ. ಅಡಿಗ ಅವರು ಎಂ. ಕೆ. ನಂಬಿಯಾರ್ ಸ್ಮಾರಕ ರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಯನ್ನು ಶುಕ್ರವಾರ ಉದ್ಘಾಟಿಸಿದರು.
ವಿದ್ಯಾರ್ಥಿಗಳಿಗೆ ಮೂಟ್ ಕೋರ್ಟ್ ಕುರಿತು ಮಾಹಿತಿಯನ್ನು ನೀಡಿದರು.
ಅವರು ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ತಡೆಗಟ್ಟುವ, ನಿಷೇಧಿಸುವ ಮತ್ತು ಪರಿಹಾರ ಒದಗಿಸುವ ಕಾಯಿದೆ ಕುರಿತು ಸವಿವರವಾಗಿ ವಿವರಿಸಿದರು. ಭಾರತೀಯ ಸಂವಿಧಾನದ ಕಲಂ 14, 15, 19(1)(ಜಿ) ಮತ್ತು 21 ಅನ್ನು ವಿವರಿಸಿದರು. ವಿದ್ಯಾರ್ಥಿ ಗಳು ತಮ್ಮ ಜ್ಞಾನ ವನ್ನು ಕೇವಲ ಪಾಠಪುಸ್ತಕಗಳು ಮತ್ತು ತೀರ್ಪುಗಳ ಮಟ್ಟಿಗೆ ಮಾತ್ರ
ಸೀಮಿತ ಗೊಳಿಸದೆ , ಅದಕ್ಕಿಂತ ಮುಂದಾಗಿ ಯೋಚಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಈ ಸಂದರ್ಭದಲ್ಲಿ ಅವರು ಕಾಲೇಜಿನ ಸಾಧನೆಗಳನ್ನು ಶ್ಲಾಘಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲಾ ಸೊಸೈಟಿಯ ಪರವಾಗಿ ಹಿರಿಯ ವಕೀಲ ರು ಹಾಗೂ ಕೆ ಎಲ್ ಎಸ್ ಕಾರ್ಯದರ್ಶಿ ವಿ.ಜಿ. ಕುಲಕರ್ಣಿ ಅವರು, ಸ್ಪರ್ಧೆಯಲ್ಲಿ ಭಾಗವಹಿಸಲು ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಸ್ಪರ್ಧಿಗಳನ್ನು ಸ್ವಾಗತಿಸಿದರು ಹಾಗೂ ಅವರಲ್ಲಿ ಸ್ಪರ್ಧಾತ್ಮಕ ಮನೋಭಾವ ದಿಂದ ಭಾಗವಹಿಸುವಂತೆ ಕೋರಿದರು.
ಕಾಲೇಜು ಪ್ರಾಂಶುಪಾಲ ರಾದ ಡಾ. ಅನಿಲ್ ಹವಾಲ್ದಾರ್ ಅವರು ಸಭೆಗೆ ಸ್ವಾಗತ ಹೇಳಿದರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಿನ್ನ ಕ್ಷೇತ್ರಗಳಲ್ಲಿ ಸಾಧಿಸಿರುವ ಸಾಧನೆಗಳ ಕುರಿತು ಮಾಹಿತಿ ನೀಡಿದರು. ಮೂಟ್ ಕೋರ್ಟ್ ಸಂಯೋಜಕರಾದ ಅಶ್ವಿನಿ ಪರಬ ಅವರು , ಸ್ಪರ್ಧೆಯ ಸಮಸ್ಯೆ ಯಾದ -“ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ತಡೆ ಕಾಯಿದೆ, 2013” ಕುರಿತಾಗಿ ವಿವರಿಸಿದರು.
ಸಮಾರಂಭದಲ್ಲಿ ಸಮಾಜದ ಎಲ್ಲಾ ನಿರ್ವಾಹಕ ಮಂಡಳಿ ಸದಸ್ಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಾರ್ಚ್ 9 ರ ವರಗೆ ನಡೆಯುವ ಈ ಸ್ಪರ್ಧೆ ಯಲ್ಲಿ ದೇಶದ ಒಂಬತ್ತು ರಾಜ್ಯಗಳಿಂದ 42 ತಂಡಗಳು ಭಾಗವಹಿಸಲಿವೆ.
ಈ ಕಾರ್ಯಕ್ರಮದ ಮಹಾ ಪೋಷಕರು ಭಾರತದ ಮಾಜಿ ಅಟಾರ್ನಿ ಜನರಲ್ ಮತ್ತು ನಮ್ಮ ಕಾಲೇಜಿನ ಹೆಮ್ಮೆಯ ಮಾಜಿ ವಿದ್ಯಾರ್ಥಿ ಪದ್ಮವಿಭೂಷಣ ಶ್ರೀ ಕೆ. ಕೆ. ವೇಣುಗೋಪಾಲ್ ಅವರು. ಅವರ ತಂದೆ ಹಾಗೂ ಹಿರಿಯ ಸಾಂವಿಧಾನಿಕ ಕಾನೂನು ನ್ಯಾಯವಾದಿ ಯಾಗಿದ್ದ ಎಂ. ಕೆ ನಂಬಿಯಾರ ಅವರ ಸ್ಮರಣೆ ಯಲ್ಲಿ ಇಲ್ಲಿಯವರೆಗೆ 14 ಬಾರಿ ಈ ರಾಷ್ಟ್ರೀಯ ಸ್ಪರ್ಧೆ ಗಳನ್ನು ನಡೆಸಲಾಗಿದೆ.
ಸ್ಪರ್ಧೆಯ ಮುಕ್ತಾಯ ಸಮಾರಂಭವು 9 ಮಾರ್ಚ್ 2025ರಂದು ಮಧ್ಯಾಹ್ನ 4:00 ಗಂಟೆಗೆ ಕೆ. ಕೆ. ವೇಣುಗೋಪಾಲ್ ಸಭಾಂಗಣ ದಲ್ಲಿ ನಡೆಯಲಿದೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಜಿ. ಬಸವರಾಜ ಅವರು ಮುಖ್ಯ ಅತಿಥಿಯಾಗಿರಲಿದ್ದಾರೆ. ಜಿಐಟಿಯ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷ ರಾಜೇಂದ್ರ ಬೆಳಗಾಂಕರ್ ಅವರು ಸಮಾರಂಭದ ಅಧ್ಯಕ್ಷರಾಗಿರಲಿದ್ದಾರೆ ಮತ್ತು ಎಲ್ಲಾ ನಿರ್ವಹಣಾ ಸದಸ್ಯರು ಉಪಸ್ಥಿತರಿರುತ್ತಾರೆ.