Join The Telegram | Join The WhatsApp |
ಬೆಳಗಾವಿ :
ಸ್ಥಳೀಯ ರುಕ್ಮಿಣಿನಗರ ಕಣಬರ್ಗಿ ರಸ್ತೆಯ ಶ್ರೀ ನವದುರ್ಗಾ ಅಯ್ಯಪ್ಪ ಮಂದಿರದ 26ನೇ ವಾರ್ಷಿಕ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ ಹಾಗೂ ಅನ್ನ ಪ್ರಸಾದ ಕಾರ್ಯಕ್ರಮ ದಿ.24 ಹಾಗೂ 25 ರಂದು ಎರಡು ದಿನಗಳಕಾಲ ಸಡಗರದಿಂದ ಜರುಗಿತು.
ದಿ.24 ರಂದು ಸಂಜೆ ಪಲ್ಲಕ್ಕಿ ಉತ್ಸವ ಹಾಗೂ ಶ್ರೀ ಅಯ್ಯಪ್ಪಸ್ವಾಮಿಯ ಭಾವಚಿತ್ರದ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ದಿ.25 ರಂದು ಬೆಳಿಗ್ಗೆ ಅಭಿಷೇಕ, ಸಹಸ್ರ ನಾಮಾರ್ಚನೆ, ಭಜನೆ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ ಮಂಗಳಾರತಿ ನಂತರ ಅನ್ನಪ್ರಸಾದ ಕಾರ್ಯಕ್ರಮ ಜರುಗಿತು. ಸಂಜೆ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರುಗಿತು.
ಬೆಳಗಾವಿ ಸಂಸದೆ ಮಂಗಲಾ ಸುರೇಶ ಅಂಗಡಿ, ಶಾಸಕ ಅನಿಲ ಬೆನಕೆ, ಹೊಟೇಲ್ ಉದ್ಯಮಿ ವಿಠ್ಠಲ ಹೆಗ್ಡೆ, ಭಾರತೀಯ ಅಯ್ಯಪ್ಪ ಸೇವಾ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಬಾರ್ಕಿ ಇವರು ಪೂಜಾ ಮಹೋತ್ಸವದಲ್ಲಿ ಭಾಗವಹಿಸಿ ಆಶೀರ್ವಚನ ಪಡೆದರು. ಅನ್ನ ಪ್ರಸಾದ ಕಾರ್ಯಕ್ರಮದಲ್ಲಿ ಸಹಸ್ರಾರು ಜನ ಭಾಗವಹಿಸಿದ್ದರು.
ದೇವಸ್ಥಾನ ಕಮೀಟಿ ಅಧ್ಯಕ್ಷ ಆನಂದ ಶೆಟ್ಟಿ ಕಾರ್ಯದರ್ಶಿ ಮಹಾವೀರ ಜೈನ, ಪ್ರಧಾನ ಅರ್ಚಕ ಸುರೇಂದ್ರ ಗುರುಸ್ವಾಮಿ, ವರ್ತಕ ಮಲ್ಲಿಕಾರ್ಜುನ ಶಿರಗುಪ್ಪಿಶೆಟ್ಟರ ಸೇರಿದಂತೆ ದೇವಸ್ಥಾನ ಕಮೀಟಿಯ ಎಲ್ಲ ಪದಾಧಿಕಾರಿಗಳು, ದಾನಿಗಳು, ರುಕ್ಮಿಣಿ ನಗರದ ನಿವಾಸಿಗಳು ಭಾಗವಹಿಸಿದ್ದರು.
Join The Telegram | Join The WhatsApp |