Join The Telegram | Join The WhatsApp |
ಬೆಂಗಳೂರು-
ಬಹುನಿರೀಕ್ಷಿತ ಕ್ರಾಂತಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಟ್ರೇಲರ್ ನೋಡಿದ ಮೇಲೆ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಮಾಸ್ ಅಂಡ್ ಕ್ಲಾಸ್ ಲುಕ್‌ನಲ್ಲಿ ದಾಸ್ ಸೂಪರ್ ಆಗಿ ಕಾಣಿಸಿಕೊಂಡಿದ್ದು, ಜನವರಿ 26 ರಂದು ಥಿಯೇಟರ್‌ಗಳಲ್ಲಿ ಈ ಸಿನಿಮಾ ʼಕ್ರಾಂತಿʼ ಎಬ್ಬಿಸುವುದು ಪಕ್ಕಾ ಎನ್ನಲಾಗಿತ್ತಿದೆ. ಟ್ರೇಲರ್ ಬಿಡುಗಡೆ ಯಾದ 13 ಗಂಟೆಯಲ್ಲಿ 27 ಲಕ್ಷ ಜನರ ವ್ಹೀವ್ ಕಂಡಿದೆ.
ʼಕ್ರಾಂತಿʼ ನಿರ್ದೇಶಕ ವಿ ಹರಿಕೃಷ್ಣ ಮತ್ತು ನಿರ್ಮಾಪಕರಾದ ಶೈಲಜಾ ನಾಗ್ ಮತ್ತು ಬಿ ಸುರೇಶ್ ಅವರ ಹಿಂದಿನ ಸಹಯೋಗದ ಎರಡನೇ ಚಿತ್ರವಾಗಿದೆ. ಈ ಚಿತ್ರದಲ್ಲಿ ರಚಿತಾ ರಾಮ್ ದರ್ಶನ್‌ಗೆ ಜೊತೆಯಾಗಿದ್ದಾರೆ. ಸುಮಲತಾ ಅಂಬರೀಶ್, ವಿ ರವಿಚಂದ್ರನ್, ಅಚ್ಯುತ್ ಕುಮಾರ್, ಗಿರಿಜಾ ಲೋಕೇಶ್ ಸೇರಿದಂತೆ ಬಹುದೊಡ್ಡ ತಾರಾಬಳಗ ಸಿನಿಮಾದಲ್ಲಿದೆ. ಕ್ರಾಂತಿ ಸಿನಿಮಾ ಜ.26ರಂದು ಬಿಡುಗಡೆಯಾಗಲಿದೆ.
ದುಷ್ಟನ ಕೈಯಿಂದ ಶಾಲೆಯನ್ನು ರಕ್ಷಿಸಲು ಶ್ರೀಮಂತನೊಬ್ಬ ತನ್ನೆಲ್ಲ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಕೊಂಡು ಬಂದು ಶತ್ರುಗಳ ಜೊತೆ ಹೋರಾಡುವ ಕಥೆಯನ್ನು ಟ್ರೇಲರ್ ಹೊಂದಿದೆ. ಆದ್ರೆ, ಆ ಸ್ಕೂಲ್‌ಗೂ ಮತ್ತು ಅಲ್ಲಿ ನಡೆಯುವ ಕಥೆಗೂ ದರ್ಶನ್ ಯಾವ ರೀತಿಯ ಸಂಬಂಧ, ರವಿಚಂದ್ರನ್ ಯಾರು, ರವಿಶಂಕರ್ ಯಾರು, ಸುಮಲತಾ ಅಂಬರೀಷ್ ಯಾಕೆ ಬಂದ್ರು, ಶ್ರೀಮಂತನಾಗಿದ್ದ ದರ್ಶನ್ ಒಂದು ಸಣ್ಣ ಶಾಲೆಗಾಗಿ ಏಕೆ ಹೋರಾಟ ಮಾಡಿದ್ರು ಎನ್ನುವುದೇ ʼಕ್ರಾಂತಿʼ ರಹಸ್ಯವಾಗಿದೆ.
Join The Telegram | Join The WhatsApp |