ಅಂಕೋಲಾ: ತಾಲೂಕಿನ ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಿಂದ ಮಣ್ಣು ಬಿದ್ದ ರಭಸಕ್ಕೆ ಗಂಗಾವಳಿ ನದಿಯಲ್ಲಿಯ ನೀರು ಇನ್ನೊಂದು ದಡಕ್ಕೆ ವೇಗವಾಗಿ ಎತ್ತರದ ಅಲೆಗಳೊಂದಿಗೆ ಅಪ್ಪಳಿಸಿದೆ. ಪರಿಣಾಮವಾಗಿ ಅಲ್ಲಿನ ಉಳವರೆ ಗ್ರಾಮದ ನದಿ ತಟದಲ್ಲಿರುವ 3 ಮನೆಗಳು ಕೊಚ್ಚಿ ಹೋಗಿದ್ದು ಆ ಮನೆಯಲ್ಲಿರುವ 10ಕ್ಕೂ ಹೆಚ್ಚು ಮಂದಿಗೆ ಮನೆಯ ಗೋಡೆಗಳು ಬಡಿದು ಗಾಯಗಳಾಗಿ ಕುಮಟಾ ಆಸ್ಪತ್ರೆಗೆ ಸಾಗಿಸಲಾಗಿದೆ. ಉಳುವರೆಯ ಗಣಪತಿ ಗೌಡ( 40)ದಿನೇಶ ಗೌಡ( 10) ಮಹೇಶ್ ಗೌಡ (46),ದೀಪಾ ಗೌಡ (11),ನಾಗಿ ಗೌಡ (65) ಹೂವ ಗೌಡ (48), ಸಾವಿತ್ರಿ ಗೌಡ (58)ದಿವ್ಯಾ ಗೌಡ (23) ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಸ್ಥಳದಲ್ಲಿ ಅಪಾರ ಹಾನಿ ಸಂಭವಿಸಿದೆ.