ಪಟ್ಟಣಂತಿಟ್ಟ: ಕೇರಳದ ಪ್ರಸಿದ್ಧ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮೊದಲ ಹಂತದ ಮಂಡಲ ಪೂಜೆ ಗುರುವಾರ ಪೂರ್ಣಗೊಂಡಿದೆ. ಬುಧವಾ ರದ ಅಂತ್ಯಕ್ಕೆ 32.5 ಲಕ್ಷ ಭಕ್ತರು ಅಯ್ಯಪ್ಪನ ದರ್ಶನ ಪಡೆದುಕೊಂಡಿದ್ದಾರೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಹೇಳಿದೆ. ಗುರುವಾರ ರಾತ್ರಿ ದೇಗುಲದ ಬಾಗಿಲು ಮುಚ್ಚಲಾ ಗಿದ್ದು, ದೇಗುಲ ಮತ್ತೆ ಡಿ.30ರ ಸಂಜೆ 5ಕ್ಕೆ ಮಕರವಿಳಕ್ಕು ಉತ್ಸವಕ್ಕಾಗಿ ತೆರೆಯಲಿದೆ. ಮಂಡಲ ಪೂಜೆಯು ವಾರ್ಷಿಕ ತೀರ್ಥಯಾತ್ರೆಯ 41 ದಿನದ ಮೊದಲ ಹಂತ ವಾಗಿದೆ. 2ನೇ ಹಂತ ಜ.14ರವರೆಗೂ ನಡೆಯಲಿದೆ.