ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಲು ಬಿಬಿಎಂಪಿ ಇದೀಗ ಸಾರ್ವಜನಿಕರಲ್ಲಿ ವಿಶೇಷ ಮನವಿ ಮಾಡಿದೆ.ಬಿಬಿಎಂಪಿ ಆರೋಗ್ಯ ಇಲಾಖೆ ಇದೀಗ ರೀಲ್ಸ್ ಮಾಡಿ ಲಕ್ಷ ಗೆಲ್ಲಿ ಎಂಬ ಘೋಷಣೆ ಹೊರಡಿಸಿದೆ. ಡೆಂಗಿ ಕುರಿತು ವಿಶೇಷವಾಗಿ ಜಾಗೃತಿ ಮೂಡಿಸಲು ಪಾಲಿಕೆ ಬಂಪರ್ ಬಹುಮಾನ ಘೋಷಣೆ ಮಾಡಿದೆ. ಮೊದಲ ಐದು ಉತ್ತಮ ರೀಲ್ಸ್ ಗಳಿಗೆ ತಲಾ 25,000 ಬಹುಮಾನ, ದ್ವಿತೀಯ ಐದು ಜನರಿಗೆ ತಲಾ ಹತ್ತು ಸಾವಿರ ಬಹುಮಾನ ಘೋಷಣೆ ಮಾಡಲಾಗಿದೆ.
ಅತ್ಯುತ್ತಮ ರೀತಿಯಲ್ಲಿ ಹೆಚ್ಚು ವಿದ್ಯಾರ್ಥಿಗಳ ಮೂಲಕ ರೀಲ್ಸ್ ಮಾಡುವ ಶಾಲೆಗೆ ಒಂದು ಲಕ್ಷ ರೂಪಾಯಿ ನೀಡಲಾಗುವುದು. ಮಕ್ಕಳಿಗೆ ಜಾಗ್ರತಿ ಮೂಡಿಸುವ ವಿಡಿಯೋ ಮಾಡಲು ಉತ್ತೇಜಿಸುವ ಶಿಕ್ಷಕರಿಗೆ 35,000 ಬಹುಮಾನ ನೀಡುವುದಾಗಿ ಪ್ರಕಟಿಸಿದೆ. ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಿ ರೀಲ್ಸ್ ಮಾಡಿ ಅದನ್ನು ಬಿಬಿಎಂಪಿ ಆರೋಗ್ಯ ಇಲಾಖೆಗೆ ಫೇಸ್ಬುಕ್ ಮತ್ತು ಎಕ್ಸ್ ಖಾತೆಗೆ ಟ್ಯಾಗ್ ಮಾಡಬೇಕು. ಹೆಚ್ಚು ವೀಕ್ಷಣೆ ಪಡೆಯುವ ರೀಲ್ಸ್ ಗೆ ಬಹುಮಾನ ನೀಡುವ ನಿರ್ಧಾರವನ್ನು ಬಿಬಿಎಂಪಿ ಪ್ರಕಟಿಸಿದೆ.