ಬೆಳಗಾವಿ ಸುವರ್ಣಸೌಧ : ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕ, 2023, ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ 2023 ಸೇರಿದಂತೆ ಐದು ವಿಧೇಯಕಗಳನ್ನು ಕಾರ್ಯದರ್ಶಿಯವರು ಡಿಸೆಂಬರ್ 12ರಂದು ವಿಧಾನ ಪರಿಷತ್ ಸಭೆಯ ಮುಂದಿಟ್ಟರು.
ಕರ್ನಾಟಕ ವೈದ್ಯಕೀಯ ಕೋರ್ಸಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಕಡ್ಡಾಯ ಸೇವಾ (ತಿದ್ದುಪಡಿ) ವಿಧೇಯಕ 2023, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ಯ (ತಿದ್ದುಪಡಿ) ವಿಧೇಯಕ 2023 ಮತ್ತು ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕ 2023ಗಳನ್ನು ಕಾರ್ಯದರ್ಶಿಗಳು ಸಭೆಯ ಮುಂದಿಟ್ಟರು. ಈ ವಿಧೇಯಕಗಳ ಪರ್ಯಾಯಲೋಚನೆ ಹಾಗೂ ಅಂಗೀಕಾರ ಪ್ರಕ್ರಿಯೆ ಇದೆ ಅಧಿವೇಶನದಲ್ಲಿ ನಡೆಯಲಿದೆ