Join The Telegram | Join The WhatsApp |
ಚಂಡೀಗಢ: 35-40 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ ಪಂಜಾಬ್‌ನ 88 ವರ್ಷದ ವೃದ್ಧನಿಗೆ ಕೊನೆಗೂ ಅದೃಷ್ಟ ಲಕ್ಷ್ಮಿ ಒಲಿದಿದ್ದು, ₹ 5 ಕೋಟಿ ಬಹುಮಾನ ಗೆದ್ದಿದ್ದಾರೆ.
ಜನವರಿ 16ರಂದು, ಪಂಜಾಬ್ ರಾಜ್ಯ ಮಕರ ಸಂಕ್ರಾಂತಿ ಲಾಟರಿ ಫಲಿತಾಂಶ ಬಂದಿದ್ದು, 88 ವರ್ಷದ ಮಹಾಂತ್ ದ್ವಾರಕ ದಾಸ್ ಅವರಿಗೆ ₹5 ಕೋಟಿಯ ಮೊದಲ ಬಹುಮಾನ ಬಂದಿದೆ. ಶೇಕಡ 30ರಷ್ಟು ತೆರಿಗೆ ಕಡಿತದ ಬಳಿಕ ಅವರಿಗೆ ಹಣ ನೀಡಲಾಗುತ್ತದೆ ಎಂದು ಲಾಟರಿ ನಿರ್ವಹಣೆಯ ಸಹ ನಿರ್ದೇಶಕ ಕರಮ್ ಸಿಂಗ್ ತಿಳಿಸಿದ್ದಾರೆ.
‘ನನಗೆ ಸಂತೋಷವಾಗುತ್ತಿದೆ. ನಾನು ಕಳೆದ 35-40 ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದೇನೆ. ನಾನು ಗೆದ್ದ ಹಣವನ್ನು ನನ್ನ ಇಬ್ಬರೂ ಗಂಡುಮಕ್ಕಳಿಗೆ ಮತ್ತು ನನ್ನ ‘ಡೇರಾ’ಗೆ ನೀಡುತ್ತೇನೆ’ ಎಂದು ಮಹಾಂತ್ ದ್ವಾರಕ ದಾಸ್ ಹೇಳಿದ್ದಾರೆ.
ನನ್ನ ತಂದೆ, ಸೋದರ ಸಂಬಂಧಿಯೊಬ್ಬರಿಗೆ ಹಣ ಕೊಟ್ಟು ಲಾಟರಿ ಟಿಕೆಟ್ ಖರೀದಿಸಿದ್ದರು. ಈಗ ಅದಕ್ಕೆ ಬಹುಮಾನ ಬಂದಿದೆ ಎಂದು ಅವರ ಮಗ ನರೇಂದ್ರ ಕುಮಾರ್ ಶರ್ಮಾ ಹೇಳಿದ್ದಾರೆ.
Join The Telegram | Join The WhatsApp |