
ಪುತ್ತೂರು; ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಳಾಲು ಶ್ರೀ ಪಾರ್ಶ್ವ ಪದ್ಮ ಜಿನಾಲಯ ಟ್ರಸ್ಟ್ ಇಲ್ಲಿಗೆ 50 ಲಕ್ಷ ಅನುದಾನ ಮಂಜೂರಾಗಿದೆ.
ಜಿನ ದೇವಾಲಯ ದುರಸ್ಥಿಗೆ ಅನುದಾನ ನೀಡುವಂತೆ ಶಾಸಕ ಅಶೋಕ್ವರೈ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಅಲ್ಪ ಸಂಖ್ಯಾತ ಇಲಾಖೆಯಿಂದ ಈ ಅನುದಾನ ಮಂಜೂರಾಗಿದೆ. ಜೈನ ದೇವಾಲಯದ ಜೀರ್ಣೋದ್ದಾರಕ್ಕೆ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಅನುದಾನ ಬಂದಿದೆ ಎನ್ನಲಾಗಿದೆ. ಜೈನರು ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ್ದರೂ ಈ ಹಿಂದೆ ಆ ಸಮುದಾಯವನ್ನು ಕಡೆಗಣಿಸಲಾಗಿತ್ತು. ಅಶೋಕ್ ರೈ ಶಾಸಕರಾದ ಬಳಿಕ ವಿಟ್ಲ ಬಜತ್ತೂರು ಸೇರಿದಂತೆ ವಿವಿಧ ಜೈನ ಬಸದಿಗಳಿಗೆ ಅನುದಾನ ಮಂಜೂರಾಗಿತ್ತು.