ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಜೂನ್ 1 ತಿಂಗಳಲ್ಲಿ 68 ಡೆಂಗ್ಯೂ ಪ್ರಕರಣ ದ್ರಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ಡಾ.ಮಹೇಶ ಕೋಣಿ ತಿಳಿಸಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಶೇಕಡಾ 45ರಷ್ಟು ಪ್ರಕರಣ ಹೆಚ್ಚು ದಾಖಲಾಗಿದೆ. ಕಳೆದ ವರ್ಷ ಜನವರಿಯಿಂದ ಜೂನ್ ತಿಂಗಳವರೆಗೆ ಒಟ್ಟು 1037 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. 101 ಜನರಿಗೆ ಪಾಸಿಟಿವ್ ಬಂದಿವೆ. ಈ ವರ್ಷ ಜನವರಿಯಿಂದ ಜೂನ್ ವರೆಗೆ 1,490 ಜನರನ್ನು ಪರೀಕ್ಷಿಸಲಾಗಿದೆ. 177 ಪಾಸಿಟಿವ್ ಬಂದಿದೆ. 45ರಷ್ಟು ಕೇಸ್ ಹೆಚ್ಚಾಗಿವೆ. ಎರಡು ಸಂಶಯಾಸ್ಪದ ಸಾವಿನ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.