ಮುಖ್ಯಾಂಶಗಳು : ಅಮಾಸೆಬೈಲು ಶಾಲೆಯಲ್ಲಿ ಉತ್ತಮ ಗುಣ ಮಟ್ಟದ ಶಿಕ್ಷಣಕ್ಕೆ ಅವಕಾಶಗಳಿವೆ, ಮಕ್ಕಳ ದಾಖಲಾತಿ, ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ. ದಾನಿಗಳು, ವಿದ್ಯಾಭಿಮಾನಿಗಳು, ಪೋಷಕರು, ಶಿಕ್ಷಕ ವೃಂದವರ ಶ್ರಮದ ಫಲವಾಗಿ ಶಾಲೆ ಪ್ರಗತಿ ಹೊಂದಿದೆ. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಹಕರಿಸಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವಲ್ಲಿ ಕೊಡುಗೆ ನೀಡಬೇಕು-ಬಿ.ಸತೀಶ ಕಿಣಿ ಬೆಳ್ವೆ,ಅಧ್ಯಕ್ಷರು, ಬೆಳ್ವೆ ಸಂದೇಶ ಕಿಣಿ, ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್,ಬೆಳ್ವೆ.

 

ಅಮಾಸೆಬೈಲು: ಮಕ್ಕಳ ಪ್ರತಿಭೆ,ಶಾಲೆ ಹಾಗೂ ಊರಿನ ಗೌರವವನ್ನು ಹೆಚ್ಚಿಸುವಲ್ಲಿ ಶಾಲಾ ವಾರ್ಷಿಕೋತ್ಸವಗಳು ಹೆಚ್ಚಿನ ಪ್ರೇರಣೆಯನ್ನು ನೀಡುತ್ತವೆ.ವಿದ್ಯೆ ವ್ಯಕ್ತಿಯ
ವ್ಯಕ್ತಿತ್ವ್ವವನ್ನು ರೂಪಿಸುವುದರೊಂದಿಗೆ ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹುಬ್ಬಳ್ಳಿ ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಹೇಳಿದರು.
ಅವರು ಅಮಾಸೆಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 70 ರ ವೈಭವ ಭಾವ ಬಣ್ಣಗಳ ಸಂಗಮಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ಶಾಸಕ ಎ.ಕಿರಣ್‌ಕುಮಾರ ಕೊಡ್ಗಿ ಅಧ್ಯಕ್ಷತೆ ಶುಭ ಹಾರೈಸಿದರು.
ಅಮಾಸೆಬೈಲು ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಕುಲಾಲ, ಉಪಾಧ್ಯಕ್ಷ ಶಂಕರ ಪೂಜಾರಿ, ಸದಸ್ಯ ಕೃಷ್ಣ ಪೂಜಾರಿ, ಸದಸ್ಯೆ ಪ್ರೇಮ ನಾಯ್ಕ, ಸುಮತಿ ಪೂಜಾರಿ, ವಿದ್ಯಾಂಗ ಉಪ ನಿರ್ದೇಶಕ ಗಣಪತಿ ಕೆ., ಉದ್ಯಮಿ ಆನಗಳ್ಳಿ ಕರುಣಾಕರ ಹೆಗ್ಡೆ, ಬಿ.ಕೆ. ನರಸಿಂಹ ಶೆಟ್ಟಿ ಬಳ್ಮನೆ, ಶಿಕ್ಷಣ ಸಂಯೋಜಕ ಶೇಖರ ಯು., ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿ, ಅಮಾಸೆಬೈಲು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಲಕ್ಷ್ಮಣ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ಸುಕೇಶ ಭಂಡಾರಿ, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಶಂಕರ್ ಐತಾಳ್ ಅಮಾಸೆಬೈಲು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆರ್.ನವೀನಚಂದ್ರ ಶೆಟ್ಟಿ ರಟ್ಟಾಡಿ, ವಿದ್ಯಾರ್ಥಿ ನಾಯಕಿ ಶ್ರೀನಿಧಿ, ಪ್ರಭಾರ ಮುಖ್ಯ ಶಿಕ್ಷಕ ಶಶಿಧರ ಶೆಟ್ಟಿ ಶಾಂದ್ರಬೆಟ್ಟು, ದಾನಿಗಳು,ಹಳೆವಿದ್ಯಾರ್ಥಿಗಳು, ಶಿಕ್ಷಣಾಭಿಮಾನಿಗಳು, ಎಸ್‌ಡಿಎಂಸಿ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆಳಗ್ಗೆ ಅಮಾಸೆಬೈಲು ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಕುಲಾಲ ಧ್ವಜಾರೋಹಣ ನೆರವೇರಿಸಿದರು. ಉಪ ನಿರೀಕ್ಷಕ ಅಶೋಕಕುಮಾರ್,ಲಕ್ಷ್ಮೀ ನಾರಾಯಣ ಕಾಶಿ, ಹರ್ಷ ಪೂಜಾರಿ, ಸತ್ಯನಾರಾಯಣ ಜೆ, ಅಶೋಕ ನಾಯ್ಕ್, ಸ್ವಾಮಿನಾಥನ್, ಸುಕನ್ಯ, ಪ್ರಭಾಕರ ಶೆಟ್ಟಿ, ಗಣೇಶ್‌ಕುಮಾರ್ ಶೆಟ್ಟಿ ಪಾಲ್ಗೊಂಡಿದ್ದರು.
ಅಡುಗೆ ಸಹಾಯಕಿಯರಾದ ಲಕ್ಷ್ಮೀ, ನಾಗರತ್ನ,
ಪ್ರಮೀಳಾ, ನಾಗರತ್ನ, ವಾಹನ ಚಾಲಕ ಕೃಷ್ಣ ನಾಯ್ಕ
ಇವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ, ಅಂಗನವಾಡಿ ಪುಟಾಣಿಗಳಿಂದ ಚಿಣ್ಣರ ಚಿಲಿಪಿಲಿ, ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ವೈವಿಧ್ಯಮಯ ನೃತ್ಯ, ಹಾಸ್ಯ ಪ್ರಹಸನ,
ಮೂಕಾಭಿನಯ,ಶಶಿಪ್ರಭಾ ಪರಿಣಯ
ಯಕ್ಷಗಾನ ನಡೆಯಿತು.

ಮುಖ್ಯ ಶಿಕ್ಷಕ ಶಶಿಧರ ಶೆಟ್ಟಿ ಶಾಂದ್ರಬೆಟ್ಟು ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಸವಿತಾ ವರದಿ ವಾಚಿಸಿದರು. ಶಿಕ್ಷಕಿ ಭಾಗ್ಯಲಕ್ಷ್ಮೀ, ಅತಿಥಿ ಶಿಕ್ಷಕಿ ರಶ್ವಿತಾ ಬಹುಮಾನ ಪಟ್ಟಿ ವಾಚಿಸಿದರು. ಗೌರವ ಶಿಕ್ಷಕಿ ಸುಮಿತ್ರಾ, ಅತಿಥಿ ಶಿಕ್ಷಕಿ ವಸಂತಿ ಬಹುಮಾನಗಳ ಪಟ್ಟಿ ವಾಚಿಸಿದರು,
ಶಿಕ್ಷಕಿ ಗೀತಾ ಹೆಗ್ಡೆ ಮತ್ತು ಶಿಕ್ಷಕಿ ಅರ್ಪಿತಾ ಆರ್ಡಿ ನಿರೂಪಿಸಿದರು.ಶಿಕ್ಷಕ ವೃಂದವರು ಸಹಕರಿಸಿದರು.ಶಿಕ್ಷಕಿ ಶೀಲಾ ಅಭಿಷೇಕ್ ವಂದಿಸಿದರು.