ಬೆಳಗಾವಿ: ಕೆಎಲ್‌ಎಸ್‌ನ ರಾಜಾ ಲಖಮಗೌಡ ಕಾನೂನು ಕಾಲೇಜಿನಲ್ಲಿ ಗುರುವಾರ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಕಾಲೇಜಿನ ಪ್ರಾಚಾರ್ಯ ಹವಾಲ್ದಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮರ್ಪಣಾ ಶಿಸ್ತು ಮತ್ತು ಬದ್ಧತೆಯ ಮಹತ್ವವನ್ನು ಸಾಧನೆಗೆ ಆಧಾರಸ್ತಂಭಗಳಾಗಿ ಎತ್ತಿ ಹಿಡಿದು, ಇತಿಹಾಸದಲ್ಲಿ ನೋಡಿದಂತೆ ವಕೀಲರು ನಾಯಕರಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಅವರು ಒತ್ತಿ ಹೇಳಿದರು.
ಅಂತರ್ ಕಾಲೇಜು ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಮಾಜಾಳಿ ಬೆಂಬಳಗಿ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ತನ್ಮಯಿ ಸರಾಫ್ ಪ್ರಾರ್ಥಿಸಿದರು. ಕಾಲೇಜಿನ ಜಿಮಖಾನಾ ಯೂನಿಯನ್‌ ಅಧ್ಯಕ್ಷ ಡಾ.ಡಿ.ಪ್ರಸನ್ನಕುಮಾರ್‌ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಫಣಿ ರಾಘವೇಂದ್ರ ದೇಸಾಯಿ, ಮಲ್ಲಿಕಾರ್ಜುನ ಪೂಜಾರಿ, ಸಾಗರ್ ಹುಳಿಯಾಳ್ ಮತ್ತು ಸತೀಶ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಿ ರುಚಿತ್ರಾ ವಂದಿಸಿದರು.ಕಾಲೇಜಿನ ಜಿಮಖಾನಾ ಯೂನಿಯನ್ ವಿಭಾಗದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಲ್ಲಾ ಸಿಬ್ಬಂದಿ ವರ್ಗದವರು, ಹಳೆ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

78th INDEPENDENCE DAY CELEBRATED AT KLS R. L .LAW COLLEGE

Belagavi: K.L.S’s Raja Lakhamgouda Law College celebrated 78th Independence Day on Thursday.Dr.A.H. Hawaldar principal of the college was the president for the function. In his presidental remarks he highlighted the importance of Dedication Discipline and Commitment as pillars for achievement. He emphasised Lawyers has the potential to be leader as seen in history. He congratulated and distributed prizes for winners of Intra college moot court competition and appreciation certificate for Majali Bembalgi Debate Competition participants.

Dr.D Prasannakumar, Chairman Gymkhana Union of college, welcomed the august,gathering. Tanmayee Saraf sung an invocation song .Students Phani Raghvendra Desai, Mallikarjun Pujari, Sagar Huliyal and Satish shared their thoughts. C Ruchitra proposed the vote of thanks.The function was organized by the Gymkhana Union department of the college. All staff members, alumni, and students were present in great number.