ಆರ್ಡಿ : ಆರ್ಡಿ ಚಾರ್ಮಾಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಾಲಾ ಆರಂಭೋತ್ಸವದ ಪ್ರಯುಕ್ತ ಶಾಲೆಯನ್ನು ತಳಿರು ತೋರಣ,ಬಣ್ಣದ ಬಣ್ಣದ ಬಲೂನ್ಗಳಿಂದ ಶುಕ್ರವಾರ ಅಲಂಕರಿಸಲಾಯಿತು.
ಹೆಬ್ರಿ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಶಶಿಧರ ಶಾಲಾ ಆರಂಭೋತ್ಸವದ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಶಿಕ್ಷಕ ಶೇಖರ್ ಶೆಟ್ಟಿಗಾರ್
ಗಣ್ಯರ ಸಮ್ಮುಖದಲ್ಲಿ ಶೈಕ್ಷಣಿಕ ಸಾಲಿನಲ್ಲಿ ಶಾಲೆಗೆ
ದಾಖಲಾತಿಗೊಂಡ ಮಕ್ಕಳನ್ನು ಗುಲಾಬಿ ಹೂವುಗಳನ್ನು
ನೀಡಿ ಶುಕ್ರವಾರ ಸ್ವಾಗತಿಸಿಕೊಂಡರು. ಗಣ್ಯರು,
ಶಿಕ್ಷಣಾಭಿಮಾನಿಗಳು, ಹಳೆ ವಿದ್ಯಾರ್ಥಿಗಳು, ಎಸ್ಡಿಎಂಸಿ ಸದಸ್ಯರು, ಸಹ ಶಿಕ್ಷಕ ವೃಂದವರು,
ಮಕ್ಕಳ ಪೋಷಕರು ಉಪಸ್ಥಿತರಿದ್ದರು.