ಭುವನೇಶ್ವರ: ಒಡಿಶಾದಲ್ಲಿ ಬಿಜೆಡಿ ಹಾಗೂ ಬಿಜೆಡಿ ಸಮಬಲದ ಸ್ಪರ್ಧೆಯಲ್ಲಿದ್ದು ಎರಡೂ ಪಕ್ಷಗಳಿಗೆ ತಲಾ 62ರಿಂದ 80 ಬರಬಹುದು ಎಂದು ಇಂಡಿಯಾ ಟುಡೇ-ಆಕ್ಸಿಸ್ ಮೈ ‘ಇಂಡಿಯಾ’ ಚುನಾವಣೋತ್ತರ ಸಮೀಕ್ಷೆ ಹೇಳಿದೆ.

147 ಸ್ಥಾನಗಳ ಅಸೆಂಬ್ಲಿಯಲ್ಲಿ ಮುಖ್ಯ ಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ (ಬಿಜೆಡಿ) ತನ್ನ ಲೆಕ್ಕಾಚಾರವನ್ನು ಗಣನೀಯವಾಗಿ ಕುಸಿಯಬಹುದು ಮತ್ತು 62 ರಿಂದ 80 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಬಿಜೆಪಿ ಸಮಬಲ ಸ್ಪರ್ಧೆ ನೀಡಿ ಅಷ್ಟೇ ಸ್ಥಾನ ಪಡೆಯಬಹುದು. ಕಾಂಗ್ರೆಸ್ 5-8 ಸ್ಥಾನ ಪಡೆಯಬಹುದು ಎಂದಿದೆ.

ಇದು ನಿಜವಾದರೆ 2004ರ ನಂತರ ರಾಜ್ಯ ವಿಧಾನಸಭೆಯಲ್ಲಿ ಬಿಜೆಡಿ ಸಂಪೂರ್ಣ ಬಹುಮತವನ್ನು ಪಡೆಯದಿರುವುದು ಇದೇ ಮೊದಲ ಬಾರಿಗೆ ಆಗಿರಬಹುದು.