ಇಂದಿನ ಭಾರತದ ಲೋಕಸಭಾ ಚುನಾವಣೆಯ ಫಲಿತಾಂಶದ ತೀರ್ಪನ್ನ ಹೃದಯಪೂರ್ವಕವಾಗಿ ಸ್ವಾಗತವನ್ನು ಮಾಡುತ್ತಿದ್ದೇನೆ ಈಗಾಗಲೇ NDA ಗೇ ಸ್ಪಷ್ಟ ಬಹುಮತ ಬಹುಮತ ಬಂದಿದ್ದು ಮತ್ತೊಮ್ಮೆ ಸತತ ಮೂರನೇ ಬಾರಿಗೆ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕಾರಮಾಡಿ ಈ ದೇಶದ ಬಡವರನ್ನ,ಯುವಕರನ್ನ, ರೈತರನ್ನ,ಮಹಿಳೆಯರನ್ನ, ಅಭಿವೃದ್ಧಿ ಮಾಡುವುದರ ಜೊತೆಗೆ ಈ ದೇಶದ ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುವುದರ ಈ ದೇಶವನ್ನ ಭ್ರಷ್ಟಾಚಾರ ಮುಕ್ತ, ಕುಟುಂಬ ರಾಜಕಾರಣದಿಂದ ಮುಕ್ತಮಾಡಲು ಮತ್ತು ಭಾರತವನ್ನ ಜಗತ್ತಿನ ಮುಂದೆ ವಿಶ್ವಗುರುವನ್ನಾಗಿ ಮಾಡಲು ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲೇಬೇಕು… ಒಟ್ಟಿನಲ್ಲಿ ಭಾರತವದ ಸರ್ವತೋಮುಖ ಅಭಿವೃದ್ಧಿಗಾಗಿ,ಬಲಿಷ್ಠ ಭಾರತಕ್ಕಾಗಿ,ಸದೃಢ ಭಾರತಕ್ಕಾಗಿ,ಆತ್ಮ ನಿರ್ಭರ ಭಾರತಕ್ಕಾಗಿ,.. ಸರ್ವ ಜನಾಂಗದ ಅಭಿವೃದ್ಧಿಗಾಗಿ.. ಮತ್ತೊಮ್ಮೆ ಶ್ರೀ ನರೇಂದ್ರ ಮೋದಿಯವರು ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರವನ್ನು ಸ್ವೀಕಾರ ಮಾಡಬೇಕು. ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸತತ ಮೂರನೇ ಬಾರಿಗೆ ಚುನಾವಣೆಯನ್ನ ಎದುರಿಸಿ ಸ್ಪಷ್ಟ ಬಹುಮತ ಪಡೆದುಕೊಂಡಿದ್ದಕ್ಕೆ ಪ್ರತಿಯೊಬ್ಬ ಭಾರತೀಯನಿಗೂ ಸಂತಸವನ್ನು ತಂದಿದೆ.
ಮಲ್ಲಿಕಾರ್ಜುನ ಪೂಜಾರಿ, ವಿದ್ಯಾರ್ಥಿ ನಾಯಕ, ಬೆಳಗಾವಿ