ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 9, ಭಾನುವಾರದಂದು ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ನಾಯಕ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ದೆಹಲಿಯ ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ಎನ್ಡಿಎ ಸಂಸದೀಯ ಪಕ್ಷದ ಸಭೆ ಆರಂಭವಾಗಿದೆ. ಮಿತ್ರ ಪಕ್ಷಗಳ ನಾಯಕರೆಲ್ಲರೂ ಭಾಗಿಯಾಗಿದ್ದಾರೆ.
ಈ ವೇಳೆ ಪ್ರತಿಕ್ರಿಯಿಸಿರುವ ಪ್ರಹ್ಲಾದ ಜೋಶಿ, ಭಾನುವಾರ ಸಂಜೆ 6 ಕ್ಕೆ ಪ್ರಮಾಣವಚನ ಸಮಾರಂಭ ನಡೆಯಲಿದೆ’ ಎಂದು ಹೇಳಿದ್ದಾರೆ.
ಎನ್ಡಿಎ ನಾಯಕರಾಗಿ ನರೇಂದ್ರ ಮೋದಿ ಆವರ ಹೆಸರನ್ನು ಜೆ.ಪಿ.ನಡ್ಡಾ ಪ್ರಸ್ತಾಪಿಸಲಿದ್ದು, ಒಕ್ಕೂಟದ ನಾಯಕರು ಬೆಂಬಲಿಸಲಿದ್ದಾರೆ. ಎನ್ಡಿಎ ನಾಯಕರು ಇಂದೇ ರಾಷ್ಟ್ರಪತಿ ಬ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ವೇಳೆ ಮಿತ್ರ ಪಕ್ಷಗಳ ಬೆಂಬಲದ ಪಟ್ಟಿಯನ್ನೂ ಸಲ್ಲಿಸಲಿದ್ದಾರೆ.