ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಅರೆಸ್ಟ್ ಆಗಿದ್ದರೂ ಅವರ ಪತ್ನಿ ವಿಜಯಲಕ್ಷ್ಮಿ ಇದುವರೆಗೆ ಒಂದೇ ಒಂದು ಪ್ರತಿಕ್ರಿಯೆ ನೀಡಿಲ್ಲ. ಪವಿತ್ರಾ ಗೌಡ ವಿಚಾರದಲ್ಲಿ ಆಗಾಗ ಸೋಶಿಯಲ್ ಮೀಡಿಯಾಗಳ ಮೂಲಕ ಯುದ್ಧ ಸಾರುತ್ತಿದ್ದ ವಿಜಯಲಕ್ಷ್ಮಿ ಅವರು ಈ ಬಾರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಘಟನೆ ಬಳಿಕ ವಿಜಯಲಕ್ಷ್ಮಿ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ.

ಈಗ ವಿಜಯಲಕ್ಷ್ಮಿ ಅವರು ಇನ್​ಸ್ಟಾಗ್ರಾಮ್​ ಪ್ರೊಫೈಲ್‌​ ಫೋಟೊ ಡಿಲೀಟ್ ಮಾಡಿದ್ದಾರೆ. ಇಷ್ಟೇ ಅಲ್ಲ ನಟ ದರ್ಶನ್ ಅವರನ್ನು ಅನ್​ಫಾಲೋ ಮಾಡಿದ್ದಾರೆ.

ಪವಿತ್ರಾ ಗೌಡ ವಿಚಾರದಲ್ಲಿ ವಿಜಯಲಕ್ಷ್ಮಿ ಈ ಹಿಂದೆ ಸಾಕಷ್ಟು ಬಾರಿ ಸೋಷಿಯಲ್​ ಮೀಡಿಯಾ ವಾರ್ ನಡೆಸಿದ್ದರು. ಪವಿತ್ರಾ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. ದರ್ಶನ್​ ಕೊಲೆ ಆರೋಪದಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಪವಿತ್ರಾ ಅವರ ವಿಚಾರದಲ್ಲಿ. ಹೀಗಾಗಿ ಅವರಿಗೆ ಸಹಜವಾಗಿಯೇ ಅಸಮಾಧಾನ ಉಂಟಾಗಿರುತ್ತದೆ. ಕೆಲ ತಿಂಗಳ ಹಿಂದೆ ಪವಿತ್ರಾ ಗೌಡ ಅವರು ದರ್ಶನ್ ಜತೆ ಇರುವ ಫೋಟೋ ಹಂಚಿಕೊಂಡಿದ್ದರು. 10 ವರ್ಷಗಳ ಸಂಬಂಧ ಎಂದು ಟ್ಯಾಗ್​ಲೈನ್ ನೀಡಿದ್ದರು. ಇದನ್ನು ವಿಜಯಲಕ್ಷ್ಮಿ ಖಂಡಿಸಿದ್ದರು. ಇದೀಗ ಇನ್​ಸ್ಟಾಗ್ರಾಮ್​ನಲ್ಲಿ ದರ್ಶನ್ ಸೇರಿ ಎಲ್ಲರನ್ನೂ ವಿಜಯಲಕ್ಷ್ಮಿ ಅನ್​ಫಾಲೋ ಮಾಡಿದ್ದಾರೆ. ಈ ಮೊದಲು ಅವರು ದರ್ಶನ್​ನ ಫಾಲೋ ಮಾಡುತ್ತಿದ್ದರು. ಇನ್​ಸ್ಟಾಗ್ರಾಮ್ ಡಿಪಿಯನ್ನು ತೆಗೆದು ಹಾಕಿದ್ದಾರೆ.