ಬೆಳಗಾವಿ : ಪ್ರಸಕ್ತ ಸಾಲಿನಲ್ಲಿ ಸಮನ್ವಯ ಶಿಕ್ಷಣ ಮಧ್ಯವರ್ತನೆ ಅನುಷ್ಠಾನಗೊಳಿಸಲು ಬ್ಲಾಕ್ ಹಂತದಲ್ಲಿ ಖಾಲಿ ಇರುವ ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ತಾತ್ಕಾಲಿಕ ನೇರಗುತ್ತಿಗೆ ಬಿ.ಐ.ಇ.ಆರ್.ಟಿ ಗಳ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಜೂ.೨೧ ರ ಸಂಜೆ ೫ ಗಂಟೆಯೊಳಗಾಗಿ ಬೆಳಗಾವಿ ಕ್ಲಬ್ ರಸ್ತೆಯಲ್ಲಿನ ಉಪನಿರ್ದೇಶರ ಕಚೇರಿ ಶಾಲಾ ಶಿಕ್ಷಣ ಇಲಾಖೆಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ೯೪೪೮೯೯೯೮೩೬ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ಖಾಲಿ ಇರುವ ಹುದ್ದೆಗಳು ವಿವರ: ಬೈಲಹೊಂಗಲ ಪ್ರೌಢ ಶಾಲೆ ೨, ಕಿತ್ತೂರು ಪ್ರೌಢ ಶಾಲೆ-೨, ಬೆಳಗಾವಿ ನಗರ-೧, ಬೆಳಗಾವಿ ಗ್ರಾಮೀಣ ಪ್ರಾಥಮಿಕ ಶಾಲೆ-೧ , ಪ್ರೌಢ ಶಾಲೆ-೧, ಖಾನಾಪುರ ಪ್ರಾಥಮಿಕ ಶಾಲೆ-೧, ಪ್ರೌಢ-೨, ರಾಮದುರ್ಗ ಪ್ರೌಢ-೨, ಸವದತ್ತಿ ಪ್ರೌಢ ಶಾಲೆ-೨. ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಅರ್ ಸಿ ಐ ನಂಬರ್ ಸೇರಿದಂತೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಬೆಳಗಾವಿ(ದ) ಕರ್ನಾಟಕ ಸಮಗ್ರ ಶಿಕ್ಷಣ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಶಾ, ಶಿ, ಇ ಹಾಗೂ ಪದನಿಮಿತ್ತ ಉಪನಿರ್ದೇಶಕರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.