ಹೆಬ್ರಿ : ಹೆಬ್ರಿಯ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮ ಅಮೃತ ವಾಹಿನಿಯಲ್ಲಿ ಎ. ವಿ. ಬಾಳಿಗ ಆಸ್ಪತ್ರೆಯ ವಿರೂಪಾಕ್ಷ ದೇವರಮನೆ ಅವರು ಭಾಗವಹಿಸಿ ಉಪನ್ಯಾಸ ನೀಡಿದರು.

ವಿದ್ಯಾರ್ಥಿಗಳು ಯಾವಾಗಲೂ ಸ್ಥಿತಪ್ರಜ್ಞರಾಗಿ ಇರಬೇಕು. ವಿಕೃತ ಮನಸ್ಸಿನ ಗುರುತಿಸಿಕೊಳ್ಳುವಿಕೆ ಇತರರಿಗೆ ಖುಷಿ ಕೊಟ್ಟು ನಮಗೆ ಅಪಾಯ ತರುತ್ತದೆ . ಇವತ್ತು ಯುವ ಜನರಲ್ಲಿ ತುಂಬಾ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಅದಕ್ಕೆ ಕಾರಣ ಸರಿಯಾಗಿ ಆಹಾರ ಸೇವಿಸದೇ ಇರುವುದು , ನೀರು ಕುಡಿಯದಿರುವುದು, ನಿದ್ದೆ ಮಾಡದಿರುವುದು , ಜಂಕ್ ಫುಡ್ ಮತ್ತು ತಂಪು ಪಾನೀಯ ಗಳನ್ನು ಹೆಚ್ಚಾಗಿ ಸೇವಿಸುವುದಾಗಿದೆ. ಸರಿಯಾದ ಆಹಾರ ಕ್ರಮವನ್ನು ಅನುಸರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ . ತಂದೆ-ತಾಯಿಯನ್ನು ತುಂಬಾ ಪ್ರೀತಿಸಿ , ಎಲ್ಲವನ್ನೂ ಅವರ ಬಳಿ ಹೇಳಿಕೊಳ್ಳಿ . ಮೊಬೈಲ್ ಆನ್ಲೈನ್ ಗೇಮ್ ಇವುಗಳಿಂದ ದೂರವಿರಿ ಎಂದು ಕಿವಿ ಮಾತು ಹೇಳಿದರು.

ಪ್ರಾಂಶುಪಾಲರು , ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆಂಗ್ಲ ಭಾಷಾ ಉಪನ್ಯಾಸಕ ಸುಹಾಸ್ ನಿರೂಪಿಸಿ ವಂದಿಸಿದರು .