ರಾಯಬಾಗ ತಾಲೂಕಿನ ಸುಟ್ಟಟ್ಟಿಯ ರೈತ ಮಹೇಶ ಖೋತ ಅವರ ಎರಡು ಮೇಕೆಗಳು ಬರೋಬ್ಬರಿ ರೂ. 2.30 ಲಕ್ಷಕ್ಕೆ ಮಾರಾಟವಾಗಿವೆ. ಬಕ್ರೀದ್ ಹಬ್ಬದ ಸಲುವಾಗಿ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ.ರಾಯಬಾಗ ತಾಲೂಕಿನ ಮೇಕೆಗಳಿಗೆ ಬೇಡಿಕೆ ಹೆಚ್ಚು. ಬಕ್ರೀದ್ ಹಿನ್ನೆಲೆಯಲ್ಲಿ ದುಬಾರಿ ಬೆಲೆ ಕೊಟ್ಟು ಗ್ರಾಹಕರು ಖರೀದಿಸುತ್ತಾರೆ. ಸಾಮಾನ್ಯವಾಗಿ ಮೇಕೆ ದರ ರೂ.10 ಸಾವಿರದಿಂದ ರೂ. 25 ಸಾವಿರ ಇರುತ್ತದೆ. ಆದರೆ ಎರಡು ಮೇಕೆಗಳು ರೂ. 1.20 ಲಕ್ಷ ಹಾಗೂ ರೂ.1.10 ಲಕ್ಷಕ್ಕೆ ಮಾರಾಟವಾಗಿವೆ. ಕೊಲ್ಲಾಪುರ, ಚಿಕ್ಕೋಡಿ ತಾಲೂಕಿನ ಯಕ್ಸಂಬಾದ ಗ್ರಾಹಕರು ಖರೀದಿಸಿದರು ಎಂದು ಮಹೇಶ ಖೋತ ವಿವರಿಸಿದರು.ನಮ್ಮದು ಅವಿಭಕ್ತ ಕುಟುಂಬ. 25 ಹೆಣ್ಣು, 12 ಗಂಡು ಮೇಕೆಗಳಿವೆ. ಈದ್ ಉಲ್ ಫಿತ್, ಬಕ್ರೀದ್ ಮುಂತಾದ ಹಬ್ಬಗಳ ಸಂದರ್ಭಗಳಲ್ಲಿ ಮಾರಲು ಮೇಕೆಗಳನ್ನು ಸಾಕುತ್ತೇವೆ ಎಂದು ವಿವರಿಸಿದ್ದಾರೆ.