ಕೇರಳದಿಂದ ವಿದ್ಯಾಭ್ಯಾಸಕ್ಕೆಂದು ಬೇರೆ ಕಡೆ ವಲಸೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಕಳೆದ 5 ವರ್ಷದಲ್ಲಿ ದ್ವಿಗುಣವಾಗಿದೆ. 2023ರ ಕೇರಳ ವಲಸೆ ಸಮೀಕ್ಷೆಯನ್ನು (ಕೆಎಮ್ಎಸ್) ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಿಡುಗಡೆ ಮಾಡಿದ್ದು, 2018ರಲ್ಲಿ 1.29 ಲಕ್ಷ ವಿದ್ಯಾರ್ಥಿಗಳು ಗುಳೆ ಹೋಗಿದ್ದರು. ಆದರೆ 2023ರಲ್ಲಿ ಆ ಸಂಖ್ಯೆ ಎರಡರಷ್ಟಾಗಿದೆ. ಅಂದರೆ 2.50 ಲಕ್ಷ ಮಂದಿ ವಿದ್ಯಾರ್ಥಿಗಳು ವಲಸೆ ಹೋಗಿದ್ದಾರೆ. ವಿದ್ಯಾರ್ಥಿಗಳು ತಮ್ಮ 17ನೇ ವಯಸ್ಸಿನಲ್ಲೇ ವಿದ್ಯಾ ಭ್ಯಾಸಕ್ಕಾಗಿ ವಿದೇಶ ಹಾಗೂ ದೇಶದ ಹಲವು ಕಡೆ ವಲಸೆ ಹೋಗಿದ್ದಾರೆ. ಅದರಲ್ಲಿ ಶೇ.41.90 ಮುಸ್ಲಿಮರು, ಶೇ.35.2 ರಷ್ಟು ಹಿಂದೂ ಹಾಗೂ ಶೇ.22.3 ರಷ್ಟು ಕ್ರಿಶ್ಚಿಯನ್ ವಿದ್ಯಾರ್ಥಿಗಳು ವಲಸೆ ಹೋಗುತ್ತಿದ್ದಾರೆ ಎಂದು ಕೆಎಮ್ಎಸ್ ವರದಿ ತಿಳಿಸಿದೆ.