ಬಕ್ರೀದ್ ಹಬ್ಬದ ಪ್ರಯುಕ್ತ ಚಿಕ್ಕೋಡಿ ತಾಲೂಕು ಇಟ್ನಾಳ ಗ್ರಾಮದ ರೈತ ಶಿವಪ್ಪ ಶೆಂಡೂರೆ ಅವರ ಪಂಜಾಬ್ ಬೀಟಲ್ ತಳಿಯ ಮೇಕೆ ಬರೋಬ್ಬರಿ 1.80 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ವಿಜಯಪುರದ ವಾಸಿಂ ಬಿಜಾಪುರ ಎಂಬುವವರು ಈ ನಾಲ್ಕು ಅಡಿ ಎತ್ತರದ 170 ಕೆಜಿ ತೂಕದ ಮೇಕೆಯನ್ನು ಖರೀದಿಸಿದ್ದಾರೆ. ಶಿವಪ್ಪ ಅವರು 11 ತಿಂಗಳ ಹಿಂದೆ ಇದನ್ನು ಪಂಜಾಬ್ ನಿಂದ ಕೇವಲ 62,000 ಕ್ಕೆ ಖರೀದಿಸಿ ತಂದಿದ್ದರು‌. ಪ್ರತಿದಿನ ಶೇಂಗಾ ಹಿಂಡಿ, ಸದಕ, ಮೆಕ್ಕೆಜೋಳ ಮುಂತಾದ ಆಹಾರ ನೀಡಿ ಬೆಳೆಸಿದ್ದರು. ಜಮ್ನಾಪುರಿ, ಮಲಬಾರಿ ಮೇಕೆ ಹೋಲುವ ತಳಿ ಇದಾಗಿದ್ದು ಲಾಹೋರಿ ಮೇಕೆ ಎಂದು ಕರೆಯಲ್ಪಡುತ್ತದೆ.