ಬೆಳಗಾವಿ : ವಾರಿಮಾಸ್ತಿಹೊಳ್ಳಿಯ ಪ್ರಸಿದ್ದ ಲಕ್ಷ್ಮೀದೇವಿಯ ಗುಡಿಯ ಕೀಲಿ ಮುರಿದು ಒಳನುಗ್ಗಿದ ಕಳ್ಳರು 1.40 ಲಕ್ಷ ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣವನ್ನು ದೋಚಿ ಪರಾರಿಯಾಗಿದ್ದಾರೆ. ಸೋಮವಾರ ಘಟನೆ ಬೆಳಕಿಗೆ ಬಂದಿದೆ. ದೇವಿಯ ಕೊರಳಿನಲ್ಲಿರುವ ಬಂಗಾರ ಬೋರಮಾಳ, ಎಕ್ಸರಾ ಸರ ಎರಡು, ಬೆಳ್ಳಿಯ ಕುದುರೆ ಒಂದು, ಒಂದೂವರೆ ಕೆಜಿ ಬೆಳ್ಳಿಯ ದೇವಿಯ ಮುಖವಾಡ, 500 ಗ್ರಾಂ ದೇವಿಯ ಕಿರೀಟ ಕಳವಾಗಿದೆ. ಯಮಕನಮರಡಿ ಪಿಎಸ್‌ಐ ಶಿವು ಮನ್ನಿಕೇರಿ ಭೇಟಿ ಪರಿಶೀಲನೆ ನಡೆಸಿದ್ದು ಯಮಕನವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.