ಹೆಬ್ರಿ : ಹೆಬ್ರಿಯ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮದ ಅಂಗವಾಗಿ ವಿಠ್ಠಲ್ ನಾಯಕ್ ಕಲ್ಲಡ್ಕ ಅವರು ಭಾಗವಹಿಸಿ ಗೀತ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ತಮ್ಮ ಮಾತು ಮತ್ತು ಹಾಡಿನ ಮೂಲಕ ವಿದ್ಯಾರ್ಥಿಗಳನ್ನು ರಂಜಿಸುವ ಜೊತೆಗೆ ವಿದ್ಯಾರ್ಥಿಗಳು ತಮ್ಮ ದಿನದ ಇಪ್ಪತ್ತ ನಾಲ್ಕು ಗಂಟೆಗಳನ್ನು ಮೂರು ಭಾಗಗಳಾಗಿ ವಿಭಾಗಿಸಿ ಎಂಟು ಗಂಟೆ ಓದು, ಎಂಟು ಗಂಟೆ ನಿದ್ದೆ ಉಳಿದ ಎಂಟು ಗಂಟೆ ಆರೋಗ್ಯ , ಕುಟುಂಬ , ಗೆಳೆತನ , ಸೇವೆ , ಹವ್ಯಾಸ ಇತ್ಯಾದಿಗಳಿಗೆ ಬಳಸಿಕೊಳ್ಳಿ. ಹೆತ್ತು , ಹೊತ್ತು , ಬಾಯಿಗೆ ತುತ್ತನಿತ್ತು , ಕೆನ್ನೆಗೆ ಮುತ್ತನಿಟ್ಟು ಸಾಕಿ ಸಲಹಿದ ತಂದೆ- ತಾಯಿಯನ್ನು ಸನ್ಮಾನಿಸುವoತೆ ಬದುಕಬೇಕು.ಜೀವನ ಪಾಠ ಮುಖ್ಯವೇ ಹೊರತು ಅಂಕಗಳೇ ಸರ್ವಸ್ವವಲ್ಲ . ಅತ್ಯಂತ ಒಳ್ಳೆ ಕುಟುಂಬ ಪದ್ಧತಿ ಇದ್ದರೆ ಅದು ಭಾರತದಲ್ಲಿ ಮಾತ್ರ ಅದಕ್ಕೆ ಭಾರತ ವಿಶ್ವಗುರು ಎಂದರು.ಪ್ರಾಚಾರ್ಯ ಅಮರೇಶ್ ಹೆಗ್ಡೆ ಸ್ಮರಣಿಕೆ ನೀಡಿ ಗೌರವಿಸಿದರು. ಹಿರ್ಗಾನ ಸರ್ಕಾರಿ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್ ಶೆಟ್ಟಿ , ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು . ಉಪನ್ಯಾಸಕ ಸುಹಾಸ್ ಶೆಟ್ಟಿ ನಿರೂಪಿಸಿ ವಂದಿಸಿದರು.