ಬೆಂಗಳೂರು: ಈಗ ಗೂಗಲ್ ಟ್ರಾನ್ಸ್ಲೇಟ್ನಲ್ಲಿ ತುಳು ಭಾಷೆ ಸೇರ್ಪಡೆಯಾಗಿದೆ.ಇಂಗ್ಲಿಷ್ ಅಥವಾ ಯಾವುದೇ ಭಾಷೆಯ ಪದಗಳನ್ನು ಉಲ್ಲೇಖಿಸಿ ತುಳುವಿನಲ್ಲಿ ಅರ್ಥ ಕೇಳಿದರೆ ಅದಕ್ಕೀಗ ಸಂವಾದಿ ಅರ್ಥ ಕೊಡಬಲ್ಲ ಪದಗಳನ್ನು ತೋರಿಸುತ್ತದೆ. ಗೂಗಲ್ ಟ್ರಾನ್ಸ್ಲೇಟ್ನಲ್ಲಿ ಹೊಸದಾಗಿ 110 ಭಾಷೆಗಳನ್ನು ಸೇರಿಸಿದೆ. ಭಾರತದ ತುಳು ಸೇರಿದಂತೆ ಅವಧಿ, ಬೋಡೋ, ಖಾಸಿ, ಕೊಟ್ಟೂರೊಕ್, ಮಾರ್ವಾಡಿ, ಸಂತಾಲಿಯನ್ನು ಸೇರಿಸಿದೆ.ಗೂಗಲ್ ಅನುವಾದವನ್ನು 2006 ರಲ್ಲಿ ಪರಿಚಯಿಸಲಾಗಿದ್ದು ಇಲ್ಲಿಯವರೆಗೆ 133 ಭಾಷೆಗಳನ್ನು ಬೆಂಬಲಿಸುತಿತ್ತು. ಆದರೆ ಈಗ ಒಂದೇ ಬಾರಿಗೆ 110 ಭಾಷೆಗಳನ್ನು ಸೇರಿಸಿದ್ದು ಒಟ್ಟು ಈಗ 243 ಭಾಷೆಗಳನ್ನು ಒಳಗೊಂಡಿದೆ.