ಹೆಬ್ರಿ : ಅಮೃತ ಭಾರತಿ ವಿದ್ಯಾ ಕೇಂದ್ರದ ಶಾಲಾ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ದಿನಾಂಕ 29/06/2024 ರಂದು ಅನ್ನಪೂರ್ಣ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ನ ಕಾರ್ಯದರ್ಶಿ ಗುರುದಾಸ್ ಶೆಣೈ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಜೆ ಸಿ ಐ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನ ಹೈಸ್ಕೂಲು ವಿಭಾಗದ ಸಮಾಜಶಾಸ್ತ್ರ ಶಿಕ್ಷಕ ಪ್ರವೀಣ್ ಶೆಟ್ಟಿ ಅವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಭಾರತ ಮಾತೆಗೆ ಪುಷ್ವಾರ್ಚನೆ ಮಾಡುವುದರ ಮೂಲಕ ಭಾರತ ಮಾತೆಗೆ ಗೌರವ ಸಲ್ಲಿಸಲಾಯಿತು. ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳು ವಿದ್ಯಾರ್ಥಿಗಳಿಗೆ ಇಂದೇ ನಾಯಕತ್ವವನ್ನು ಮೈದುಂಬಿಸಿಕೊಂಡರೆ ಭಾವಿ ನಾಯಕತ್ವಕ್ಕೆ ದಾರಿ ದೀಪವಾಗುತ್ತದೆ. ಎಂಬುದಾಗಿ ಹೇಳುವುದರೊಂದಿಗೆ ಮಕ್ಕಳು ಭತ್ತ ತುಂಬುವ ಚೀಲಗಳಾಗದೆ ಭತ್ತ ಬೆಳೆಯುವ ಗದ್ದೆಗಳಾಗಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗುರುದಾಸ್ ಶೆಣೈಯವರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ನೆರವೇರಿಸುವುದರ ಜೊತೆಗೆ ವಿದ್ಯಾರ್ಥಿ ಸಂಘದ ನಡತೆ ಎಲ್ಲಾ ವಿದ್ಯಾರ್ಥಿಗಳಿಗೆ ಮಾರ್ಗಸೂಚಿಯಾಗಬೇಕು ಹಾಗೂ ಈ ವರುಷ ಮಾಡುವ ಎಲ್ಲಾ ಕಾರ್ಯಕ್ರಮದ ಪೂರ್ವಭಾವಿ ತಯಾರಿಯನ್ನು ಮಾಡಿಕೊಂಡಿರಬೇಕು ಎಂದು ಪದಾಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿ ಸಂಘದ ನಾಯಕ ಶ್ರೀರಾಮ್ ಬಡಜೆ ಹಾಗೂ ಉಪ ನಾಯಕಿ ಸಾನ್ವಿ ಕೆ ಯವರು ಮುಂದಿನ ಕಾರ್ಯವೈಖರಿಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾ ಕೇಂದ್ರದ ಪ್ರಾಚಾರ್ಯರಾದ ಎಚ್ ಅರುಣ್ ಗುರೂಜಿ ಹಾಗೂ ಮುಖ್ಯೋಪಾಧ್ಯಾಯನಿ ಅನಿತಾ ಮಾತಾಜಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಅಘ್ಯ೯ಅವರು ನಿರೂಪಣೆ ನಡೆಸಿದರೆ ಸ್ವಾಗತವನ್ನು ಅನಘ ಸಿ ಕೆ ಹಾಗೂ ವಂದನಾರ್ಪಣೆಯನ್ನು ಅನನ್ಯ ನೆರವೇರಿಸಿದರು.