ಹೆಬ್ರಿ : ಹೆಬ್ರಿಯ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಿತು.ಸರ್ಕಾರಿ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ. ಸುರೇಶ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಂಘವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಸಂಘದ ಸದಸ್ಯರು ಸಂಸ್ಥೆಯ ರಾಯಭಾರಿಗಳು ಇದ್ದಂತೆ. ನಾಯಕರು ಇತರರಿಗೆ ಮಾದರಿಯಾಗಿರಬೇಕು . ಉನ್ನತ ಉದ್ದೇಶದಿಂದ ನಿರ್ಮಾಣಗೊಂಡ ಈ ಸಂಸ್ಥೆಯ ಕೀರ್ತಿಯನ್ನು ಎತ್ತರಿಸುವಲ್ಲಿ ಒಂದು ವರ್ಷಗಳ ಕಾಲ ದಕ್ಷತೆಯ ಕಾರ್ಯನಿರ್ವಹಣೆ ಮಾಡುವಂತೆ ಸೂಚಿಸಿ, ಜೀವನ ನಿರ್ವಹಣೆ ಒಂದು ಕಲೆ, ಅದನ್ನು ಇಂತಹ ಸಂಸ್ಥೆಗಳಲ್ಲಿ ಕಲಿಯಬೇಕು. ನೀವು ಉದ್ಯೋಗ ಪಡೆದಾಕ್ಷಣ ಅದು ಯಶಸ್ಸಲ್ಲ, ಬದಲಿಗೆ ಶಿಕ್ಷಣ ಮುಗಿಸಿ ಉದ್ಯೋಗ ಪಡೆದ ಮೇಲೆ ಸಾಮಾಜಕ್ಕೆ ನೀವು ಏನು ಕೊಡುತ್ತಿರೋ ಅದು ಯಶಸ್ಸು ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಅಮರೇಶ್ ಹೆಗ್ಡೆ ಪ್ರತಿಜ್ಞಾ ವಿಧಿ ಭೋದಿಸಿದರು. ಇನ್ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಪ್ರಣಮ್ ಜಿ ಪೂಜಾರಿ ಮತ್ತು ಅಮೂಲ್ಯ ಹೆಗ್ಡೆ ಅವರನ್ನು ಅಭಿನಂದಿಸಲಾಯಿತು.
ವಿದ್ಯಾರ್ಥಿಗಳಾದ ಅನುಷ ನಾಯಕ್ ಸ್ವಾಗತಿಸಿ, ಸೃಷ್ಟಿ ಕೆ ಪೂಜಾರಿ ಅತಿಥಿಗಳ ಪರಿಚಯ ಮಾಡಿದರು. ಪದ್ಮಶ್ರೀ ವಂದಿಸಿದರು. ಸುತೇಜ ಕಾರ್ಯಕ್ರಮ ನಿರೂಪಿಸಿದರು. ಪಿ . ಆರ್. ಓ . ವಿಜಯಕುಮಾರ್ ಶೆಟ್ಟಿ , ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.