ಬೆಳಗಾವಿ :
ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ಮಂದಿರದಲ್ಲಿ ಜ. 22 ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.
ರಾಮಜನ್ಮಭೂಮಿ ಟ್ರಸ್ಟ್ ಮೂಲಕ ಅಯೋಧ್ಯೆಯ ಪ್ರಭು ಶ್ರೀರಾಮನ ಸನ್ನಿಧಿಯಲ್ಲಿ ಪೂಜಿಸಲ್ಪಟ್ಟ ಆಮಂತ್ರಣ ಅಕ್ಷತ ಮನೆ ಮನೆ ತಲುಪಿಸುವ ಯೋಜನೆಯ ಭಾಗವಾಗಿ ಪವಿತ್ರ ಅಕ್ಷತಾ ಕಲಶ ರಾಮಭಕ್ತರ ಮೂಲಕ ಬೆಳಗಾವಿಯಲ್ಲಿ ಭವ್ಯ ಸ್ವಾಗತ
ಡಿ.8 ರಂದು ನಡೆಯಲಿದೆ.

ಬೆಳಗಾವಿಯ ಕಪಿಲೇಶ್ವರ ಮಂದಿರದಲ್ಲಿ ಭಕ್ತಿ ಪೂರ್ವಕ ಸಂಜೆ 6.45 ಪೂಜೆ, ಆರತಿ ಸಲ್ಲಿಸಿ ಪಲ್ಲಕ್ಕಿ ಉತ್ಸವ, ರಾಮ ಜಪ, ಭಜನೆ ಕೀರ್ತನೆ ಸಂಕೀರ್ತನ ಯಾತ್ರೆಯ ಮೂಲಕ ರಾಮ ಭಕ್ತರು ಭವ್ಯ ಮೆರವಣಿಗೆ ಮೂಲಕ ತಂದು ವಿಶ್ವ ಹಿಂದು ಪರಿಷತ್ ಕಾರ್ಯಾಲಯ ಸಮರಸತಾ ಭವನದಲ್ಲಿ ಇರಿಸಲಾಗುವುದು.

ಬೆಳಗಾವಿಯ ಎಲ್ಲಾ ಶ್ರೀರಾಮ ಭಕ್ತರು ಆಮಂತ್ರಣದ ಪವಿತ್ರ ಅಕ್ಷತಾ ಕಲಶ ಭವ್ಯ ಸ್ವಾಗತ ಮಾಡುವ ಮೂಲಕ ಪ್ರಭು ಶ್ರೀರಾಮನ ಸೇವೆಯಲ್ಲಿ ಪಾಲ್ಗೊಂಡು ಪುನೀತರಾಗಬೇಕೆಂದು ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದೆ.

ರಂಗೋಲಿ ಹಾಕಿ ರಸ್ತೆ ಶೃಂಗರಿಸಬಹುದು. ಪುಷ್ಪಾರ್ಚನೆ ಮಾಡಬಹುದು, ದೇಶಭಕ್ತರ ಪೋಟೋ ಇಡಬಹುದು, ಆರತಿ ಮಾಡಬಹುದು.ಶಂಖನಾದ ಮಾಡಬಹುದು. ಪವಿತ್ರ ಕಲಶಕ್ಕೆ ಪ್ರತಿದಿನ 11ಹನುಮಾನ ಚಾಲಿಸಾ ಪಠಣ ಸಂಜೆ 7.30 ರಿಂದ 8.30 ರ ವರೆಗೆ ನಡೆಯುತ್ತದೆ.

ಭಜನೆ , ರಾಮಜಪ, ಸಂಕೀರ್ತನೆ, ಸಂಗೀತದ ಮೂಲಕ ಭಕ್ತರು ಪೂರ್ಣ ದಿನ ಸೇವೆ ಸಲ್ಲಿಸಿ ಈ ಪುಣ್ಯ ಕಾರ್ಯದಲ್ಲಿ ಸೇವೆ ಸಲ್ಲಿಸಬಹುದು. ಸೇವೆ ಸಲ್ಲಿಸುವವರು ಮುಂಚಿತವಾಗಿ ತಮ್ಮ ಹೆಸರನ್ನು ನೊಂದಾಯಿಸಬಹುದು.

ಮಾಹಿತಿಗೆ ಜಿಲ್ಲಾ ಕಾರ್ಯದರ್ಶಿ
ಆನಂದ ಕರಲಿಂಗಣ್ಣವರ, ಜಿಲ್ಲಾ ಅಧ್ಯಕ್ಷರು, ಶ್ರೀಕಾಂತ ಕದಂ ಮೊಬೈಲ್ ಸಂಖ್ಯೆ
9448847604,9739097507
9945016501,8050999060,
916366316489, 8310225588 ಇಲ್ಲಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.