ಬೆಳಗಾವಿ: ಶಿಶು ಮಾರಾಟ ಮತ್ತು ಭ್ರೂಣ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಪಾಲಾಗಿದ್ದ ಆರೋಪಿಗೆ ಇದೀಗ ಸಂಭ್ರಮದಿಂದ ಹೂ ಮಾಲೆ ಹಾಕಿ ಸ್ವಾಗತ ಕೋರಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.ಜೈಲು ಪಾಲಾಗಿದ್ದ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡ ಖಾನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಕಿತ್ತೂರಿಗೆ ಬಂದ ಆರೋಪಿಯನ್ನು ಆತನ ಅಭಿಮಾನಿಗಳು ಸ್ವಾಗತಿಸಿದ್ದು ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಿಂಗ್ ಈಸ್ ಬ್ಯಾಕ್ ಎಂಬ ಶೀರ್ಷಿಕೆಯಡಿ ಚಲನಚಿತ್ರದ ಹಾಡನ್ನು ಹಾಕಿದ ವಿಡಿಯೋ ವೈರಲ್ ಆಗಿದೆ.ನಕಲಿ ವೈದ್ಯನ ಮೇಲೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು ಬಂಧಿಸಿದ್ದರು. ನಂತರ ಕಿತ್ತೂರು ಪೊಲೀಸ್ ಠಾಣೆಯಲ್ಲೂ ಆರೋಪಿ ಮೇಲೆ ಪ್ರಕರಣ ದಾಖಲಾಗಿತ್ತು. ತಪಾಸಣೆ ನಡೆಸಿದಾಗ ಈ ನಕಲಿ ವೈದ್ಯ ಕೃಷಿ ಮಾಡಲು ಗುತ್ತಿಗೆ ಪಡೆದ ಜಮೀನಿನಲ್ಲಿ ಹೂತಿಟ್ಟಿದ್ದ ಮೂರು ಭ್ರೂಣಗಳು ಪತ್ತೆಯಾಗಿದ್ದವು.