ಚೆನ್ನೈ: ತಮಿಳುನಾಡು ಬಿಎಸ್ಪಿ ಮುಖ್ಯಸ್ಥ ಕೆ. ಆರ್ಮ್ ಸ್ಟ್ರಾಂಗ್ ಅವರನ್ನು ಹತ್ಯೆಗೈದ ಆರೋಪಿಗಳಲ್ಲಿ ಒಬ್ಬನನ್ನು ಶನಿವಾರ ರಾತ್ರಿ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಚೆನ್ನೈ ಮಾಧವರಂ ಬಳಿ ಪೋಲಿಸ್ ಎನ್ಕೌಂಟರ್ನಲ್ಲಿ ಈ ಹತ್ಯೆ ಮಾಡಲಾಗಿದೆ. ಆರ್ಮಸ್ಟ್ರಾಂಗ್ ಅವರ ಚಟುವಟಿಕೆ ಮೇಲೆ ನಿರಂತರ ನಿಗಾ ಇರಿಸಿಕೊಂಡು ಅವರನ್ನು ಹಿಂಬಾಲಿಸಿ ಜುಲೈ 5ರಂದು ಚೆನ್ನೈ ಪೆರಂಬೂರ್ ಪ್ರದೇಶದ ಅವರ ನಿವಾಸದ ಬಳಿ ಆರು ಅಪರಿಚಿತ ವ್ಯಕ್ತಿಗಳೊಂದಿಗೆ ಕೊಂದು ಹಾಕಿದ್ದರು.