ಮಂಗಳೂರು: ತುಳುನಾಡಿನ ಅತ್ಯಂತ ಕಾರಣಿಕ ದೈವವಾಗಿರುವ ಕುತ್ತಾರು ಕೊರಗಜ್ಜನ ಕಟ್ಟೆಯಲ್ಲಿ ಭಾನುವಾರ ನಡೆದ ಹರಕೆಯ ಕೋಲದಲ್ಲಿ ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಹಾಗೂ ಭಾರತೀಯ ಕ್ರಿಕೆಟ್ ತಂಡದ ಖ್ಯಾತನಾಮ ಆಟಗಾರ ಕೆ.ಎಲ್. ರಾಹುಲ್, ಖ್ಯಾತ ಚಲನಚಿತ್ರ ನಟ ಸುನಿಲ್ ಶೆಟ್ಟಿ ಕುಟುಂಬದವರು ಭಾಗಿಯಾಗಿದ್ದರು.
ನಟಿ ಕತ್ರಿನಾ ಕೈಫ್, ನಟ ಸುನಿಲ್ ಶೆಟ್ಟಿ, ಪುತ್ರ ಅಹಾನ್ ಶೆಟ್ಟಿ, ಪುತ್ರಿ ಆಧ್ಯಾ ಶೆಟ್ಟಿ, ಕ್ರಿಕೆಟಿಗ ಕೆ.ಎಲ್. ರಾಹುಲ್, ಮ್ಯಾಟ್ರಿಕ್ಸ್
ಎಂಟರ್ ಟೈನ್ಮೆಂಟ್ ನ ರೇಷ್ಮಾ ಶೆಟ್ಟಿ, ಕತ್ರಿನಾ ಪತಿ ವಿಕಿ ಕೌಶಲ್, ಮತ್ತು ವಿ.ಎಂ. ಕಾಮತ್ ಸೇರಿದಂತೆ ಅವರ ಪರಿಚಿತರಾಗಿರುವ ಒಂಬತ್ತು ಜನರ ಹರಕೆ ಕೋಲವನ್ನು ಎರಡು ತಿಂಗಳ ಹಿಂದಷ್ಟೇ ಕೊರಗಜ್ಜನ ಕಟ್ಟೆಯಲ್ಲಿ ಬರಸಲಾಗಿತ್ತು. ಭಾನುವಾರದ ಕೋಲದಲ್ಲಿ ವಿಕಿ ಕೌಶಲ್ ಹೊರತುಪಡಿಸಿ
ಉಳಿದವರು ಭಾಗಿಯಾಗಿದ್ದರು. ಕತ್ರಿನಾ, ರೇಷ್ಮಾ, ಆದ್ಯಾ ಪರಂಪರೆಯಂತೆ ಕೋಲದಿಂದ ಹೊರಗುಳಿದು ಕಚೇರಿಯಲ್ಲಿ ಉಳಿದುಕೊಂಡರು. ರಾಹುಲ್ ಮತ್ತು ಅಹಾನ್ ಕೋಲದಲ್ಲಿ ಭಾಗವಹಿಸಿದರು. ಸಂಜೆ ವೇಳೆಗೆ ಕುತ್ತಾರಿಗೆ ಆಗಮಿಸಿದ ಬಾಲಿವುಡ್ ನವರು ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ಕೊರಗಜ್ಜನ ಕಟ್ಟೆಯ ಕಚೇರಿಯಲ್ಲಿ ಮನವಿ ಮಾಡಿದ್ದರು. ಸ್ಥಳದಲ್ಲಿ ಫೋಟೋ ತೆಗೆಯಲು ಬಿಡದೆ, ತೆಗೆದವರನ್ನು ಡಿಲೀಟ್ ಮಾಡುವಂತೆ, ಕಟ್ಟೆಯೊಳಗೆ ಬೆಳಕಿಲ್ಲದೆ ನಡೆಯುತ್ತಿದ್ದ ಕೋಲವನ್ನು ಹೊರಗೆ ನಿಂತಿದ್ದ ಕತ್ರಿನಾ ಸೇರಿದಂತೆ ಉಳಿದವರು ಕಣ್ಣು ಮುಚ್ಚಿ ಪ್ರಾರ್ಥನೆಯಲ್ಲಿ ಭಾಗಿಯಾದರು. ಕತ್ರಿನಾ ಕೈಫ್ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ.ಜನ್ಮದಿನಕ್ಕೂ ಮೊದಲು ದರ್ಶನ :
ನಟಿ ಕತ್ರಿನಾ ಕೈಫ್ ಅವರು ಮುಸ್ಲಿಂ. ಹಿಂದೂ ವ್ಯಕ್ತಿಯನ್ನು ವರಿಸಿದ್ದಾರೆ. ಈ ಕಾರಣಕ್ಕೆ ಅವರು ಹಿಂದೂ ಹಾಗೂ ಮುಸ್ಲಿಂ ಧರ್ಮ ಎರಡನ್ನೂ ಆಚರಿಸುತ್ತಾರೆ. ಅವರಿಗೆ ಹಿಂದೂ ದೇವರ ಬಗ್ಗೆಯೂ ಭಕ್ತಿ ಇದೆ. ಜುಲೈ 16ರಂದು ಅವರ ಜನ್ಮದಿನ. ಬರ್ತ್ ಡೇಗೂ ಮುನ್ನ ಅವರು ಮಂಗಳೂರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.