ಹೆಬ್ರಿ : ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಆಗುಂಬೆ-ಹೆಬ್ರಿ ಸಂಪರ್ಕಿಸುವ ಸೀತಾನದಿ ಬಳಿ ನದಿ ಉಕ್ಕಿ ಹರಿದಿದೆ. ಇದರ ಪರಿಣಾಮ ಈ ರಸ್ತೆಯಲ್ಲಿ ಇದೀಗ ತಾತ್ಕಾಲಿಕವಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.ಮಂಗಳವಾರ ಬೆಳಗ್ಗೆಯಿಂದ ಸೀತಾನದಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಹೀಗಾಗಿ ಹೆಬ್ರಿ-ಸೋಮೇಶ್ವರ ಮಾರ್ಗದಲ್ಲಿ ವಾಹನ ಸಂಚರಿಸದಂತೆ ಮತ್ತು ಪರ್ಯಾಯವಾಗಿ ಆಗುಂಬೆ ಹೋಗುವವರು ಹೆಬ್ರಿಯಿಂದ ಮಾಂಡಿ ಮೂರು ಕೈ, ಮಡಾಮಕ್ಕಿ- ಸೋಮೇಶ್ವರ ಮೂಲಕ ತೆರಳುವಂತೆ ಹೆಬ್ರಿ ಪೊಲೀಸ್ ಠಾಣಾಧಿಕಾರಿ ಮಹೇಶ್ ನೀಡಿದ್ದಾರೆ.