ಮೂಡುಬಿದಿರೆ: ಮಿಜಾರು ಸರಕಾರಿ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ, ನಿವೃತ್ತರಾಗಿದ್ದ ಬಿ.ಡಿ.ಶಿವರಾಜ್ ನಿಧನರಾಗಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಬೆಳಗುಳಿಯಲ್ಲಿ 1966 ಜುಲೈ 22 ರಂದು ಜನಿಸಿದ ಇವರು ಬೆಳಗುಳಿಯಲ್ಲಿಯೇ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದರು.ಮೈಸೂರು ವಿಶ್ವವಿದ್ಯಾಲಯದಿಂದ ಹಿಂದಿ ಎಂ.ಎ. ಪದವಿಯನ್ನು ಪಡೆದು ಹಿಂದಿ ಶಿಕ್ಷಕರಾಗಿ ಮಿಜಾರು ಪ್ರೌಢಶಾಲೆಗೆ ನೇಮಕಗೊಂಡರು. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ, ಶಾಲೆಯ ಎಲ್ಲಾ ಕಾರ್ಯಗಳಲ್ಲಿ ಸ್ವಯಂ ಆಸಕ್ತಿಯಿಂದ ತೊಡಗಿಸಿಕೊಂಡಿರುತ್ತಿದ್ದ ಅವರು 2019 ರಲ್ಲಿ ಸ್ವಯಂ ನಿವೃತ್ತಿ ಹೊಂದಿದರು.ಅನಂತರ ತಮ್ಮ ಹುಟ್ಟೂರಾದ ಬೆಳಗುಳಿಯ ಹಿರಿಯರ ಮನೆಯಲ್ಲಿ ವಾಸವಿದ್ದರು. ಅಲ್ಲಿಯೇ ತಮ್ಮ ಕೃಷಿ, ತೋಟದ ಕಾರ್ಯಗಳಲ್ಲಿ ಮಗ್ನರಾಗಿದ್ದರು. ಇವರು ಇಂದು ಜುಲೈ 17ರಂದು ಬೆಳಗಿನ ಜಾವ ಹೃದಯ ಸ್ತಂಭನದಿಂದ ನಿಧನ ಹೊಂದಿರುತ್ತಾರೆಂದು ತಿಳಿದು ಬಂದಿದೆ.