ಪಂಢರಾಪುರ: ಆಷಾಡ ಏಕಾದಶಿ ಪ್ರಯುಕ್ತ ಬುಧವಾರದಂದು ಪ್ರಸಿದ್ಧ ಯಾತ್ರಾ ಸ್ಥಳ ಪಂಢರಾಪುರಕ್ಕೆ ಭಕ್ತಸಾಗರ ಹರಿದು ಬಂದಿದೆ. ಕರ್ನಾಟಕ-ಮಹಾರಾಷ್ಟ್ರ- ಆಂಧ್ರಪ್ರದೇಶ-ಗೋವಾ- ತೆಲಂಗಾಣ ಮುಂತಾದ ರಾಜ್ಯಗಳ ಲಕ್ಷಾಂತರ ಭಕ್ತರು ಆಗಮಿಸಿ ಚಂದ್ರಭಾಗ ನದಿಯಲ್ಲಿ ಸ್ನಾನ ಮಾಡಿ ವಿಠಲ ದರ್ಶನ ಪಡೆದರು. ಸಂಪ್ರದಾಯದಂತೆ ಮಹಾರಾಷ್ಟ್ರದ ಸರ್ಕಾರದ ಪ್ರಥಮ ಪೂಜೆಯನ್ನು ಮುಖ್ಯಮಂತ್ರಿ ಏಕನಾಥ ಶಿಂದೆ ದಂಪತಿ ನೆರವೇರಿಸಿದರು. ತುಳಸಿ ಮಾಲೆ ಧರಿಸಿದ ಸಂತರು ತಲೆಯ ಮೇಲೆ ತುಳಸಿ ಕಟ್ಟೆ ಹೊತ್ತು ಕುಣಿದಾಡಿದರು.
ಲಕ್ಷಾಂತರ ಭಕ್ತರು ಪಾದಯಾತ್ರೆ ಹಾಗೂ ವಾಹನಗಳ ಮೂಲಕ ವಿಠಲನ ಸನ್ನಿಧಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಪಂಡರಪುರದಲ್ಲಿ ಎಲ್ಲೆಡೆ ಜನಸಾಗರ ಕಂಡುಬಂತು.