ಕುಂದಾಪುರ: ಕಳೆದ ಹಲವು ದಿನಗಳಿಂದ 74 ನೇ ಉಳ್ಳೂರು ಗ್ರಾಮದ ಚಿಟ್ಟೆ ರಾಜಗೋಪಾಲ್ ಹೆಗ್ಡೆ ಅವರ ಅಡಿಕೆ ತೋಟದಲ್ಲಿ ಠಿಕಾಣಿ ಹೂಡಿದ ಒಂಟಿ ಕಾಡು ಕೋಣ ಜೂ.24ರಂದು ಬೆಳಗ್ಗೆ ಮನೆ ಅಂಗಳಕ್ಕೆ ಬಂದಿದೆ.
ರೋಗಗ್ರಸ್ತವಾಗಿದ್ದು, ಸರಿಯಾಗಿ ಕಣ್ಣು ಕಾಣಿಸದೆ ಸರಿಯಾಗಿ ನಡೆಯಲು ಆಗದ ಈ ಕಾಡು ಕೋಣ ನಡೆಯುವಾಗ ಕಾಲು ಕುಣಿಸುತ್ತಿದೆ. ಅವರ ಅಡಿಕೆ ತೋಟದ ಅಡಿಕೆ ಸೋಗೆ ತಿನ್ನುವಾಗ ಹಲವು ಅಡಿಕೆ ಗಿಡಗಳನ್ನು ಮುರಿದು ಹಾಕಿದೆ.