ದೆಹಲಿ : ದೇಶದ ಅತಿದೊಡ್ಡ ಪೋಸ್ಟಲ್ ನೆಟ್‌ವರ್ಕ್ ಸೇವೆಯಾದ ಇಂಡಿಯಾ ಪೋಸ್ಟ್ (sIndia Post), ಗ್ರಾಮೀಣ ಡಾಕ್ ಸೇವಕ್ (Gramin Dak Sevak) 44,228 ಖಾಲಿ ಹುದ್ದೆಗಳ ನೇಮಕಾತಿಯನ್ನು ಅಧಿಸೂಚನೆಯಲ್ಲಿ ಹೊರಡಿಸಿದೆ.
ಬ್ರ್ಯಾಂಚ್ ಪೋಸ್ಟ್‌ ಮಾಸ್ಟರ್, ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್‌ಮಾಸ್ಟರ್ ಹಾಗೂ ಡಾಕ್‌ ಸೇವಕ್‌ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಎಸ್‌ಎಸ್‌ಎಲ್‌ಸಿ ನಂತರ ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಬೇಕು ಎಂದು ಆಸಕ್ತಿ ಹೊಂದಿದ್ದಲ್ಲಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕ ವಲಯದಲ್ಲಿ 1940 ಹುದ್ದೆಗಳಿಗೆ ನೇಮಕ ನಡೆಯಲಿದೆ. indiapostgdsonline.gov.in ಮೂಲಕ ಮೂಲಕ ಆನ್‌ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.
ನೇಮಕಾತಿ ಪ್ರಾಧಿಕಾರ : ಭಾರತೀಯ ಅಂಚೆ ಇಲಾಖೆ
ಹುದ್ದೆ ಹೆಸರು : ಗ್ರಾಮೀಣ ಡಾಕ್ ಸೇವಕ, ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌, ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್‌ ಮಾಸ್ಟರ್‌
ಭಾರತದಾದ್ಯಂತ ಒಟ್ಟು ಹುದ್ದೆಗಳ ಸಂಖ್ಯೆ : 44,228
ಕರ್ನಾಟಕದಲ್ಲಿ ಹುದ್ದೆಗಳ ಸಂಖ್ಯೆ : 1940
ಬ್ರ್ಯಾಂಚ್‌ ಪೊಸ್ಟ್‌ ಮಾಸ್ಟರ್‌ ಹುದ್ದೆ : ಮಾಸಿಕ 12,000-29,380 ರೂ.,
ಅಸಿಸ್ಟಂಟ್ ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್ ಹಾಗೂ ಡಾಕ್‌ ಸೇವಕ್‌ ಹುದ್ದೆ : ಮಾಸಿಕ 10,000-24,470 ರೂ. ವೇತನ

ಅರ್ಜಿ ಸಲ್ಲಿಸಲು ಅರ್ಹತೆಗಳು :
ಎಸ್‌ಎಸ್‌ಎಲ್‌ಸಿ ಅಥವಾ10ನೇ ತರಗತಿ ತೇರ್ಗಡೆ ಆಗಿರಬೇಕು. ಅರ್ಜಿ ಹಾಕುವವರಿಗೆ ಆಯಾ ರಾಜ್ಯದ ಅಧಿಕೃತ ಭಾಷೆ ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು.
ಕರ್ನಾಟಕ ರಾಜ್ಯದ ಉದ್ಯೋಗ ಆಕಾಂಕ್ಷಿಗಳು ಅಧಿಕೃತ ಭಾಷೆ ಕನ್ನಡವನ್ನು ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು. ಅಲ್ಲದೆ, ಬೇಸಿಕ್ ಕಂಪ್ಯೂಟರ್ ಜ್ಞಾನ ಹೊಂದಿರುವ ಪ್ರಮಾಣ ಪತ್ರ ಪಡೆದವರಿಗೆ ಆದ್ಯತೆ.
ವಯೋಮಿತಿ :
ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆ ದಿನಾಂಕ 05-08-2024 ಕ್ಕೆ ಸರಿಯಾಗಿ ಅಭ್ಯರ್ಥಿಗೆ ಕನಿಷ್ಠ 18 ವರ್ಷ ಆಗಿರಬೇಕು.
ಗರಿಷ್ಠ 40 ವರ್ಷ ವಯಸ್ಸು ಮೀರಬಾರದು. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರಿಗೆ 5 ವರ್ಷ, ಆರ್ಥಿಕವಾಗಿ ಹಿಂದುಳಿದ ಕೆಟಗರಿಯವರಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಇದೆ. ಆನ್‌ಲೈನ್‌ ಅಪ್ಲಿಕೇಶನ್ ಶುಲ್ಕ 100 ರೂ.

ಆನ್‌ಲೈನ್‌ ಅರ್ಜಿ ಸಲ್ಲಿಸುವ ವಿಧಾನ
ವೆಬ್‌ಸೈಟ್‌ ವಿಳಾಸ https://indiapostgdsonline.gov.in/ ಗೆ ಭೇಟಿ ನೀಡಿ ಮೊದಲಿಗೆ ರಿಜಿಸ್ಟ್ರೇಷನ್‌ ಪಡೆಯಬೇಕು. ನಂತರ ಮತ್ತೆ ಲಾಗಿನ್‌ ಆಗುವ ಮೂಲಕ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿ, ಅಪ್ಲಿಕೇಶನ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್‌ ತೆಗೆದುಕೊಳ್ಳಬೇಕು. ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ 3 ಹಂತಗಳ ಆನ್‌ಲೈನ್‌ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
ಮಹತ್ವದ ದಿನಾಂಕಗಳು
ಆನ್‌ಲೈನ್‌ ಅಪ್ಲಿಕೇಶನ್ ಸಲ್ಲಿಸಲು ಆರಂಭದ ದಿನಾಂಕ ; 15-07-2024
ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ ; 05-08-2024
ಅರ್ಜಿಯಲ್ಲಿನ ಮಾಹಿತಿಗಳನ್ನು ತಿದ್ದುಪಡಿ ಮಾಡಲು ಅವಕಾಶ; 06-08-2024 ರಿಂದ 08-08-2024ರ ವರೆಗೆ
ಆಯ್ಕೆ ವಿಧಾನ ?
ಅಪ್ಲಿಕೇಶನ್‌ ಸಲ್ಲಿಸಿದ ಅಭ್ಯರ್ಥಿಗಳನ್ನು ನಿಯಮಾನುಸಾರ ಸ್ವಯಂಚಾಲಿತ ಮೆರಿಟ್ ಪಟ್ಟಿ ತಯಾರು ಮಾಡುವ ಮೂಲಕ, ಶಾರ್ಟ್‌ ಲಿಸ್ಟ್‌ ಆದ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ನಡೆಸಿ, ನೇಮಕಾತಿ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಮೊದಲ ಅರ್ಹತಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಹುದ್ದೆಗೆ ವರದಿ ಮಾಡಿಕೊಳ್ಳದಿದ್ದಲ್ಲಿ 2ನೇ ಅರ್ಹತಾ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.