ಬೆಳಗಾವಿ: ಉಗರಗೋಳ ಬಳಿಯ ಹಿರೇಕುಂಬಿ ಸನಿಹ ನಿನ್ನೆ ಸಂಜೆ ಸುಮಾರಿಗೆ ನಡೆದ ಎರಡು ಬೈಕ್ ಗಳ ನಡುವಿನ ಅಪಘಾತದಲ್ಲಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಸವದತ್ತಿಯ ಬಸವರಾಜು ಪ್ರಭುನವರ (48)ಮತ್ತು ಹಂಚಿನಾಳ ಗ್ರಾಮದ ಯಲ್ಲಪ್ಪ ಕೊರವಿನ ಕೊಪ್ಪ (46) ಮೃತಪಟ್ಟವರು. ಈ ದುರ್ಘಟನೆಯಲ್ಲಿ ಗಾಯಗೊಂಡಿರುವ ಹಿಂಬದಿ ಕುಳಿತಿದ್ದ ಇಬ್ಬರನ್ನು ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.