ಬೆಳಗಾವಿ : ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದೆ. ಇದರಿಂದ ಬೆಳಗಾವಿ-ಗೋವಾ ನಡುವೆ ಸಂಪರ್ಕ ಅಸ್ತವ್ಯಸ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಉಭಯ ರಾಜ್ಯಗಳ ನಡುವೆ ಸಂಚರಿಸುವ ವಾಹನ ಸವಾರರಿಗೆ ಬೆಳಗಾವಿ ಪೊಲೀಸರು ಮಹತ್ವದ ಸೂಚನೆ ನೀಡಿದ್ದಾರೆ.

ಜಾಂಬೋಟಿ ಹಾಗೂ ಚೋರ್ಲಾ ಪ್ರದೇಶ ವ್ಯಾಪ್ತಿಗಳಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ವಾಹನಗಳ ಸಂಚಾರದಲ್ಲಿ ಅಲ್ಲಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಸೇತುವೆಗಳು ಶಿಥಿಲಗೊಂಡಿದ್ದು ಹಿನ್ನೆಲೆಯಲ್ಲಿ ಬೆಳಗಾವಿ ನಗರದಿಂದ ಜಾಂಬೋಟಿ ಚೋರ್ಲಾ ಮಾರ್ಗವಾಗಿ ಗೋವಾ ಕಡೆಗೆ ಸಂಚರಿಸುವ ಎಲ್ಲಾ ಭಾರಿ ವಾಹನಗಳು ಪೀರನವಾಡಿ ಕ್ರಾಸ್ ಹತ್ತಿರ ಎಡ ತಿರುವು ಪಡೆದುಕೊಂಡು ಖಾನಾಪುರ ಮಾರ್ಗವಾಗಿ ಮುಂದೆ ಸಂಚರಿಸುವಂತೆ ಬೆಳಗಾವಿ ಪೊಲೀಸರು ಕೋರಿದ್ದಾರೆ.