ಮಂಗಳೂರು: ಮಂಗಳೂರು-ಮಡಗಾಂವ ಜಂಕ್ಷನ್ ನಡುವೆ ಟಿಕೆಟ್ ಕಾಯ್ದಿರಿಸುವಿಕೆಗೆ ಅವಕಾಶ ಇಲ್ಲದ ವಿಶೇಷ ಮೆಮು ರೈಲ್ವೆ ಸೇವೆಯನ್ನು ಇದೀಗ ಕೊಂಕಣ ರೈಲ್ವೆಯು ಮೂರು ದಿನಗಳ ಕಾಲ ಒದಗಿಸಲಿದೆ.ಈ ವಿಶೇಷ ರೈಲು ಜುಲೈ 20, 21 ಮತ್ತು 22ರಂದು ಈ ಎರಡು ಜಂಕ್ಷನ್ಗಳ ನಡುವೆ ಸಂಚರಿಸಲಿದೆ. ಬೆಳಗ್ಗೆ ಆರಕ್ಕೆ ಮಡಗಾಂವ ಜಂಕ್ಷನ್ ನಿಂದ ಹೊರಡುವ ರೈಲು ಮಧ್ಯಾಹ್ನ 12.15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಮಧ್ಯಾಹ್ನ 12:40ಕ್ಕೆ ಮಂಗಳೂರು ಜಂಕ್ಷನ್ ನಿಂದ ಹೊರಡುವ ರೈಲು ಸಂಜೆ 7 ಗಂಟೆಗೆ ಮಡಗಾಂವ ಜಂಕ್ಷನ್ ತಲುಪಲಿದೆ. ಕಾಣಕೋಣ, ಕಾರವಾರ, ಹರವಾಡ, ಅಂಕೋಲಾ, ಗೋಕರ್ಣ ರೋಡ್,ಮಿರ್ಜಾನ್, ಕುಮಟಾ, ಹೊನ್ನಾವರ, ಮಂಕಿ, ಮುರುಡೇಶ್ವರ, ಭಟ್ಕಳ, ಶಿರೂರು, ಮೂಕಾಂಬಿಕಾ ರೋಡ್ , ಬೈಂದೂರು, ಬಿಜೂರು, ಸೇನಾಪುರ, ಕುಂದಾಪುರ, ಬಾರ್ಕೂರು, ಉಡುಪಿ, ಮೂಲ್ಕಿ, ಸುರತ್ಕಲ್, ತೋಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.